Home Kannada ಅಪ್ರಾಪ್ತೆ ಕೈ ಹಿಡಿದು, ಪ್ಯಾಂಟ್​ ಜಿಪ್ ತೆಗೆದರೆ ಪೊಕ್ಸೊ ಅಡಿ ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್​

ಅಪ್ರಾಪ್ತೆ ಕೈ ಹಿಡಿದು, ಪ್ಯಾಂಟ್​ ಜಿಪ್ ತೆಗೆದರೆ ಪೊಕ್ಸೊ ಅಡಿ ಲೈಂಗಿಕ ದೌರ್ಜನ್ಯವಲ್ಲ: ಬಾಂಬೆ ಹೈಕೋರ್ಟ್​

by Eha

ನಾಗ್ಪುರ (ಮಹಾರಾಷ್ಟ್ರ): ಅಪ್ರಾಪ್ತೆಯ ಕೈ ಹಿಡಿದು, ಪ್ಯಾಂಟ್​ ಜಿಪ್ ತೆಗೆಯುವುದು ಹಾಗೂ ಪರಸ್ಪರ ಸಂಪರ್ಕವಿಲ್ಲದಿರುವುದು ಪೊಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. 50 ವರ್ಷದ ವ್ಯಕ್ತಿಯೋರ್ವ 5 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಪ್ರಕರಣದ ವಿಚಾರಣೆಯನ್ನು ನ್ಯಾಯಪೀಠ ಕೈಗೆತ್ತಿಕೊಂಡಿತ್ತು. ಈ ವೇಳೆ, ನ್ಯಾಯಮೂರ್ತಿ ಪುಷ್ಪಾ ಗಣೆದಿವಾಲಾ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ಪ್ರಕಟಿಸಿದೆ.

ವ್ಯಕ್ತಿಯೊಬ್ಬ ತನ್ನ ಮಗಳನ್ನು ಕೈಯಲ್ಲಿ ಎತ್ತಿಕೊಂಡು ಪ್ಯಾಂಟ್ ಜಿಪ್​ ತೆರೆಯುವಾಗ ಸಿಕ್ಕಿಬಿದ್ದಿದ್ದಾನೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಳು. ಈ ದೂರಿನ ಆಧಾರದ ಮೇಲೆ ಕುಜೂರ್​ ಎಂಬಾತ ಅಕ್ಟೋಬರ್​ 2020ರಲ್ಲಿ ಐಪಿಸಿ 354-ಎ (1) (ಐ), 448 ಹಾಗೂ ಸೆಕ್ಷನ್ 8 (ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ಆರೋಪಿ ಉದ್ದೇಶಪೂರಿತವಾಗಿ ದೈಹಿಕ ಸಂಪರ್ಕ ಹೊಂದಿದ್ದರೆ ಪೊಕ್ಸೋ ವ್ಯಾಪ್ತಿಯಲ್ಲಿ ಬರಲಿದೆ ಎಂದಿದೆ. ಹಾಗಾಗಿ ಈ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳು ಸಾಲುವುದಿಲ್ಲ ಎಂದು ತಿಳಿಸಿದೆ. ಇನ್ನು ಸುಪ್ರೀಂಕೋರ್ಟ್​ನ ನ್ಯಾ.ಬೋಬ್ಡೆ, ನ್ಯಾ.ಬೋಪಣ್ಣ ಮತ್ತು ನ್ಯಾ.ಸುಬ್ರಮಣಿಯನ್ ಅವರ ನೇತೃತ್ವದ ಪೀಠ ಈ ಆದೇಶವನ್ನು ತಡೆಹಿಡಿದಿದೆ. ಜತೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ನಾಗ್ಪುರ್ ಪೀಠ ಜನವರಿ 19ರಂದು ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವಂತೆ ಸೂಚಿಸಿದೆ.

Related Posts

Leave a Comment