ಕರೀಂನಗರ: ಕೇವಲ ಒಂದು ಮಹಿಳೆಗಾಗಿ ವ್ಯಕ್ತಿಯೊಬ್ಬ ಪತ್ನಿ ಮತ್ತು ಮಗಳನ್ನು ಕಬ್ಬಿಣದ ರಾಡ್ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಲ್ಲಿನ ಹುಜುರಾಬಾದ್ನಲ್ಲಿ ನಡೆದಿದೆ.ಕೌಟುಂಬಿಕ ಕಲಹ ಮತ್ತು ಆಸ್ತಿ ವಿವಾದವೇ ತಾಯಿ ಮತ್ತು ಮಗಳ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪಟ್ಟಣದ ಸೈರುಪಾ ಗಾರ್ಡನ್ನ ಹಿಂದಿನ ಬೀದಿಯಲ್ಲಿರುವ ಮನೆಯೊಂದರಲ್ಲಿ ಆಟೋ ಚಾಲಕ ಕೊಕ್ಕಿಸಾಲ ವೆಂಕಟೇಶ್ ಮತ್ತು ಆತನ ಪತ್ನಿ ರಮಾ (45) ಮತ್ತು ಮಗಳು ಅಮಾನಿ (24) ವಾಸಿಸುತ್ತಿದ್ದರು. ರಮಾ ವೆಂಕಟೇಶ್ನ ಎರಡನೇ ಪತ್ನಿ.ವೆಂಕಟೇಶ್ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಜೀವನ ನಡೆಸುತ್ತಿದ್ದನು. ಮನೆಯ ಆಸ್ತಿಯೆಲ್ಲವೂ ರಮಾ ಹೆಸರಲ್ಲಿದೆ. ಆಸ್ತಿಯನ್ನು ನನ್ನ ಹೆಸರಿಗೆ ಬರೆದುಕೊಡುವಂತೆ ವೆಂಕಟೇಶ್ ಆಗಾಗ ತಗಾದೆ ತೆಗೆಯುತ್ತಿದ್ದನು. ಈ ಹಿನ್ನೆಲೆ ಮನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ನಿನ್ನೆ ಸಹ ದಂಪತಿ ಮಧ್ಯೆ ಕೌಟುಂಬಿಕ ಕಲಹ ನಡೆದಿದೆ. ಮನೆಯಲ್ಲಿ ಮಲಗಿದ್ದ ವೇಳೆ ವೆಂಕಟೇಶ್ ರಮಾ ಮತ್ತು ಅಮಾನಿ ತಲೆ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಕೆಗಾಗಿ ಪತ್ನಿ, ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ ಭೂಪ!
previous post