Home Kannada ಕುಡಿದ ಅಮಲಿನಲ್ಲಿ ನಿಂತಿದ್ದ ಸ್ಕೂಟರ್​ ಮೇಲೆ ಆಟೋ ಹತ್ತಿಸಿದ ಚಾಲಕ

ಕುಡಿದ ಅಮಲಿನಲ್ಲಿ ನಿಂತಿದ್ದ ಸ್ಕೂಟರ್​ ಮೇಲೆ ಆಟೋ ಹತ್ತಿಸಿದ ಚಾಲಕ

by Eha

ಮಂಗಳೂರು: ಕುಡಿದ ಅಮಲಿನಲ್ಲಿ ಚಾಲಕನೋರ್ವ ಪಾರ್ಕಿಂಗ್ ಸ್ಥಳದಲ್ಲಿದ್ದ ಸ್ಕೂಟರ್ ಮೇಲೆಯೇ ಆಟೋ ರಿಕ್ಷಾ ಹತ್ತಿಸಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್​​ನಲ್ಲಿ ನಡೆದಿದೆ. ಪಡುಪಣಂಬೂರು ನಿವಾಸಿಯಾಗಿರುವ ಆಟೋರಿಕ್ಷಾ ಚಾಲಕ ಮದ್ಯದ ನಶೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದನು. ಈ ವೇಳೆ ಆತ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿದ್ದ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ್ದು, ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಾನಿಯಾಗಿರುವ ಸ್ಕೂಟರ್ ಹಳೆಯಂಗಡಿ ಲೈಟ್​​ಹೌಸ್ ನಿವಾಸಿ ವಿಶ್ವನಾಥ ಎಂಬುವರಿಗೆ ಸೇರಿದ್ದಾಗಿದ್ದು, ವಿಚಾರ ತಿಳಿದು ಅವರು ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಚಾಲಕ ಹಾಗೂ ವಿಶ್ವನಾಥ ಮಧ್ಯೆ ಮಾತಿನ ಚಕಮಕಿ ನಡೆದಿದೆ.

Related Posts

Leave a Comment