Home Kannada ತೊಗರಿ ರಾಶಿಗೆ ಬೆಂಕಿ ಇಟ್ಟ ಖದೀಮರು: ನಂದಿಸಲು ನೀರು ಸಿಗದಂತೆ ಕೊಳವೆಬಾವಿ ಕೇಬಲ್​ ಕಿತ್ತ ಕೀಚಕರು

ತೊಗರಿ ರಾಶಿಗೆ ಬೆಂಕಿ ಇಟ್ಟ ಖದೀಮರು: ನಂದಿಸಲು ನೀರು ಸಿಗದಂತೆ ಕೊಳವೆಬಾವಿ ಕೇಬಲ್​ ಕಿತ್ತ ಕೀಚಕರು

by Eha

ವಿಜಯಪುರ: ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ‌ ಅಪಾರ ಪ್ರಮಾಣದ ಬೆಳೆ‌ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದಿದೆ. ಪಡನೂರ ಗ್ರಾಮದ ಮಲ್ಲು ಅವರಾದಿ ಎಂಬುವರು ತಮ್ಮ ಹೊಲದಲ್ಲಿ 35 ರಿಂದ 40 ಕ್ವಿಂಟಾಲ್​ನಷ್ಟು ತೊಗರಿ ಬೆಳೆ ಸಂಗ್ರಹಿಸಿದ್ದರು. ಈ ತೊಗರಿ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ, ನಂದಿಸಲು ನೀರು ಸಿಗಬಾರದೆಂದು ಹೊಲದಲ್ಲಿದ್ದ ಕೊಳವೆ ಬಾವಿ ಕೇಬಲ್ ಕತ್ತರಿಸಿ ಹೊತ್ತೊಯ್ದಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆ, ತೊಗರಿ ರಾಶಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ಗ್ರಾಮದಲ್ಲಿ ವ್ಯಕ್ತವಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದು, ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment