ಬೆಂಗಳೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಕೊಲೆ ಮತ್ತು ದರೋಡೆಗೆ ಹೊಂಚು ಹಾಕುತ್ತಿದ್ದ ಡಿ ಜೆ ಹಳ್ಳಿ ರೌಡಿ ಶೀಟರ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ಮೋದಿ ಗಾರ್ಡನ್ ಪ್ಯಾರಾಚೂಟ್ ಮಿಲಿಟರಿ ಗ್ರೌಂಡ್ ಪಕ್ಕಾ ಮಡ್ ರಸ್ತೆ ಬಳಿ ಇವರನ್ನು ಬಂಧಿಸಲಾಗಿದ್ದು, ಹಳೆದ್ವೇಷದ ಹಿನ್ನೆಲೆ ಕೊಲೆ ಮಾಡಿ ನಗದು ಚಿನ್ನಾಭರಣ ದೋಚಲು ಆರೋಪಿಗಳು ಸಜ್ಜಾಗಿದ್ದರು ಎಂದು ತಿಳಿದುಬಂದಿದೆ. ಮಸರ್ ಖಾನ್, ಯೋಗೇಶ್, ರಿಜ್ವಾನ್, ಸಮೀತ್, ಪುನೀತ್, ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸುವ ಸಲುವಾಗಿ ಇಟ್ಟುಕೊಂಡಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಮಜರ್ ಖಾನ್ ವಿರುದ್ಧ ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಸೇರಿದಂತೆ ಅನೇಕ ಪ್ರಕರಣಗಳಿವೆ. ಡಿ ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆಗೆ ಹೊಂಚು : ಡಿ ಜೆ ಹಳ್ಳಿ ರೌಡಿ ಶೀಟರ್ ಸೇರಿ ಐವರು ಅರೆಸ್ಟ್
previous post