Home Kannada ಪಣಂಬೂರು ನಂದನೇಶ್ವರ ದೇವಳದ ಚಪ್ಪರಕ್ಕೆ ಬೆಂಕಿ

ಪಣಂಬೂರು ನಂದನೇಶ್ವರ ದೇವಳದ ಚಪ್ಪರಕ್ಕೆ ಬೆಂಕಿ

by Eha

ಮಂಗಳೂರು: ನಗರದ ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ಚಪ್ಪರಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ಇಂದು ನಡೆದಿದೆ. ನಂದನೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಚಪ್ಪರಕ್ಕೆ ಅಕಸ್ಮಾತ್ತಾಗಿ ಬೆಂಕಿ ತಗುಲಿದೆ. ವಾರ್ಷಿಕ ಜಾತ್ರಾ ಮಹೋತ್ಸವದ‌ ನಿಮಿತ್ತ ಬಲಿ ಪೂಜೆ ವೇಳೆ ಈ ಅವಘಡ‌ ಸಂಭವಿಸಿದೆ. ತಕ್ಷಣ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದೆ. ಈ ಸಂದರ್ಭ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Related Posts

Leave a Comment