Home Kannada ಬಂಟ್ವಾಳದಲ್ಲಿ ಚರ್ಚಿಗೆ ನುಗ್ಗಿದ ಕಳ್ಳರು, ಪವಿತ್ರ ಸ್ವತ್ತುಗಳಿಗೆ ಹಾನಿ

ಬಂಟ್ವಾಳದಲ್ಲಿ ಚರ್ಚಿಗೆ ನುಗ್ಗಿದ ಕಳ್ಳರು, ಪವಿತ್ರ ಸ್ವತ್ತುಗಳಿಗೆ ಹಾನಿ

by Eha

ಬಂಟ್ವಾಳ: ತಾಲೂಕಿನ ನಾವೂರು ಗ್ರಾಮದ ಫರ್ಲ ಚರ್ಚಿಗೆ ನುಗ್ಗಿದ ಕಳ್ಳರು ಹಣಕ್ಕಾಗಿ ಹುಡುಕಾಡಿ ಚರ್ಚಿನ ಸ್ವತ್ತುಗಳಿಗೆ ಹಾನಿ ಮಾಡಿರುವ ಘಟನೆ ನಡೆದಿದೆ. ಕಳ್ಳರು ಚರ್ಚಿನೊಳಗೆ ಬರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚರ್ಚಿನ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಹಣಕ್ಕೆ ಹುಡುಕಾಟ ನಡೆಸಿದ್ದು, ಈ ವೇಳೆ ಚರ್ಚಿನ ಕೆಲ ಆಸ್ತಿಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Related Posts

Leave a Comment