Home Kannada ಬೈಕ್​ಗಳ ನಡುವೆ ಡಿಕ್ಕಿಯಾಗಿ ರಸ್ತಗೆ ಬಿದ್ದ ಸವಾರ: ಹಿಂದಿನಿಂದ ಬಂದ ಬಸ್​ ಹರಿದು ಸಾವು

ಬೈಕ್​ಗಳ ನಡುವೆ ಡಿಕ್ಕಿಯಾಗಿ ರಸ್ತಗೆ ಬಿದ್ದ ಸವಾರ: ಹಿಂದಿನಿಂದ ಬಂದ ಬಸ್​ ಹರಿದು ಸಾವು

by Eha

ಮಂಗಳೂರು: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಸವಾರನ ಮೇಲೆ ಹಿಂಬಂದಿಯಿಂದ ಬಂದ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಳೆಯಂಗಡಿ ಬಳಿಯ ತೋಕೂರು ಸರ್ಕಾರಿ ಶಾಲೆಯ ಬಳಿ ನಡೆದಿದೆ.

ಮೂಡುಬಿದಿರೆ ನಿವಾಸಿ ಮೋಕ್ಷಿತ್ ಮೃತ ದುರ್ದೈವಿ. ಮತ್ತೊಬ್ಬ ಬೈಕ್ ಸವಾರ ಬಸವರಾಜ್ ಎಂಬಾತನಿಗೆ ಗಂಭೀರ ಗಾಯಗಳಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಂಗಳೂರಿನಿಂದ ಕಿನ್ನಿಗೋಳಿ ಕಡೆ ಬರುತ್ತಿದ್ದ ಸರ್ವಿಸ್ ಬಸ್​ ಓವರ್ ಟೇಕ್ ಮಾಡುವ ಭರದಲ್ಲಿ ಬೈಕ್ ಸವಾರ ಮೋಕ್ಷಿತ್ ಎದುರಿಗೆ ಬರುತ್ತಿದ್ದ ಮತ್ತೊಂದು ಬೈಕ್​ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ಬಗ್ಗೆ ಸುರತ್ಕಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ.

Related Posts

Leave a Comment