Home Kannada ಮುದ್ದಾದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು!

ಮುದ್ದಾದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣು!

by Eha

ಕಡಪ: ಎಂಟು ವರ್ಷದ ಮಗಳೊಂದಿಗೆ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ಶಂಕರಾಪುರಂನಲ್ಲಿ ನಡೆದಿದೆ.ಕಡಪ ನಿವಾಸಿ ಶ್ರಾವಣಿ (29) ಶಿವಕುಮಾರ್​ ರೆಡ್ಡಿ ಜೊತೆ 9 ವರ್ಷಗಳ ಹಿಂದೆ ಮದುವೆಯಾಗಿದೆ. ಇವರಿಬ್ಗರಿಗೆ ಮುದ್ದಾದ ಎಂಟು ವರ್ಷದ ತನ್ವಿಕಾ ಎಂಬ ಮಗಳಿದ್ದಳು. ಶಿವಕುಮಾರ್​ ರೆಡ್ಡಿ ಸದ್ಯ ಅಮೆರಿಕದಲ್ಲಿ ಸ್ವಾಫ್ಟ್​ವೇರ್​ ಉದ್ಯೋಗ ಮಾಡುತ್ತಿದ್ದಾರೆ.ಶ್ರಾವಣಿ ಮತ್ತು ಆಕೆಯ ಮಗಳು ತನ್ವಿಕಾ ಶಂಕರಾಪುರಂದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು.

ಆದ್ರೆ ಕಳೆದ ಐದು ವರ್ಷಗಳದಿಂದಲೂ ಗಂಡ – ಹೆಂಡ್ತಿ ಮಧ್ಯೆ ಮನಸ್ತಾಪಗಳ ನಡೆಯುತ್ತಲೇ ಇದ್ದವು. ಈ ಕ್ರಮದಲ್ಲಿ ಗುರುವಾರ ಬೆಳಗ್ಗೆ ಶ್ರಾವಣಿ ತನ್ನ ಮಗಳು ತನ್ವಿಕ್​ ಜೊತೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಮೃತದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.ಆತ್ಮಹತ್ಯೆಗೆ ಅನೇಕ ಕಾರಣಗಳಿವೆ. ಈ ಘಟನೆ ಬಗ್ಗೆ ಕಡಪ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಾಗಿದೆ ಎಂದು ಸಿಐ ಅಶೋಕ್​ ರೆಡ್ಡಿ ಹೇಳಿದ್ದಾರೆ.

Related Posts

Leave a Comment