Home Featured ಮೈಸೂರು: ರೋಹಿಣಿ ಸಿಂಧೂರಿ VS ಸಾರಾ ಮಹೇಶ್‌..! ಡಿಸಿ ನಡೆ ಬಗ್ಗೆ ಸ್ಪೀಕರ್‌ಗೆ ದೂರು ಎಂದ ಶಾಸಕ

ಮೈಸೂರು: ರೋಹಿಣಿ ಸಿಂಧೂರಿ VS ಸಾರಾ ಮಹೇಶ್‌..! ಡಿಸಿ ನಡೆ ಬಗ್ಗೆ ಸ್ಪೀಕರ್‌ಗೆ ದೂರು ಎಂದ ಶಾಸಕ

by admin

ಮೈಸೂರು: ಮಂಗಳವಾರ ಮೈಸೂರಿನಲ್ಲಿ ನಡೆದ ಕಾಗದ ಪತ್ರ ಹಾಗೂ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ನಡೆಯ ಬಗ್ಗೆ ಶಾಸಕ ಸಾರಾ ಮಹೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರ ನಡೆಯ ಬಗ್ಗೆ ಪ್ರಮುಖರೊಂದಿಗೆ ಮಾತನಾಡುತ್ತೇನೆಂದು ತಿಳಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿ ರೋಹಿಣಿ ಸಿಂಧೂರಿಯವರ ನಡೆ ಬೇಸರ ತರಿಸಿದೆ. ಅಲ್ಲದೇ ಅವರ ವರ್ತನೆ ಬಗ್ಗೆ ಸ್ಪೀಕರ್ ಹಾಗೂ ಮುಖ್ಯ ಕಾರ್ಯದರ್ಶಿ ಅವರೊಟ್ಟಿಗೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಮಂಗಳವಾರ ಮೈಸೂರಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಕಾಗದ ಪತ್ರ ಸಮಿತಿಯ ಸಭೆ ನಡೆಸುವ ವೇಳೆ ಅವರಿಗೆ ತಿಳಿಸಿದ್ದೆವು. ಇನ್ನು ಈ ಸಮಿತಿ ಬಂದ ವೇಳೆ ಶಿಷ್ಟಾಚಾರ ಇರಲಿದೆ. ಹಾಗಾಗಿ ಶಿಷ್ಟಾಚಾರ ಉಲ್ಲಂಘನೆ ಮತ್ತು ಡಿಸಿ ರೋಹಿಣಿ ಸಿಂಧೂರಿಯವರ ವರ್ತನೆ ಬಗ್ಗೆ ಸ್ಪೀಕರ್, ಮುಖ್ಯ ಕಾರ್ಯದರ್ಶಿಗೆ ಅವರೊಟ್ಟಿಗೆ ಮಾತನಾಡುತ್ತೇನೆ. ಅಂದಿನ ಸಭೆಯಲ್ಲಿ ಡಿಸಿ ಸಿಂಧೂರಿ ಅವರ ಅವಶ್ಯಕತೆ ಇರಲಿಲ್ಲ, ಆದ್ದರಿಂದ ಸಮಯವಿದ್ದರೇ ಸಭೆಯಲ್ಲಿ ಇರಿ ಎಂದು ಹೇಳಿದೆ ಅಷ್ಟೇ ಎಂದರು.
ಮೈಸೂರು: ಡಿಸಿ, ಸಾರಾ ಮಹೇಶ್ ನಡುವೆ ಮುಂದುವರೆದ ಮನಸ್ಥಾಪ..! ಸಭೆಯಿಂದ ಹೊರನಡೆದ ಸಿಂಧೂರಿನಾನು ಈ ಸಮಿತಿಯ ಅಧ್ಯಕ್ಷನಾಗಿ ಈಗ ಬಂದಿದ್ದೇನೆ.‌ ಶಾಸಕನಾಗಿ ಅಷ್ಟೇ ನಾನು ಅವರ ಬಗ್ಗೆ ವಿರೋಧಿಸಿದ್ದೆ. ಮಂಗಳವಾರ ಘಟನೆಯ ಬಗ್ಗೆಯಲ್ಲ. ಹಿರಿಯ ಅಧಿಕಾರಿಗಳಿಗೆ ತಿಳಿಸುವುದು ನನ್ನ ಕರ್ತವ್ಯ. ಅವರಿಗೆ ವಿಷಯ ಮುಟ್ಟಿಸುತ್ತೇನೆ ಅಷ್ಟೇ ಎಂದರು.

Related Posts

Leave a Comment