Home Kannada ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾಸಮಿತಿಯ 76ನೇ ವಾರ್ಷಿಕ ಮಹಾಪೂಜೆ.

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮಾ ಸೇವಾಸಮಿತಿಯ 76ನೇ ವಾರ್ಷಿಕ ಮಹಾಪೂಜೆ.

by Eha

ಚಿತ್ರ ವರದಿ: ಉಮೇಶ್. ಕೆ.ಅಂಚನ್.

ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮಾ ಸೇವಾ ಸಮಿತಿಯ 76ನೇ ವಾರ್ಷಿಕ ಮಹಾಪೂಜೆಯನ್ನು ಜ.30ರಂದು ಸರಕಾರದ ಕೋವಿಡ್ ನಿಯಮವನ್ನು ಪಾಲಿಸಿ ನಿಯಮಿತ ಸದಸ್ಯರ ಹಾಗೂ ಭಕ್ತರ ಉಪಸ್ಥಿತಿಯಲ್ಲಿ ಮಂದಿರದ ವಠಾರದಲ್ಲಿ ವಿಜ್ರಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ ಪುರೋಹಿತ್ ಹೆಜಮಾಡಿ ಹರೀಶ್ ಶಾಂತಿಯವರ ಪೌರೋಹಿತ್ಯದಲ್ಲಿ ಮಂದಿರ ಶುಧ್ಧೀಕರಣ, ಗಣಹೋಮ , ಶ್ರೀ ಸತ್ಯನಾರಾಯಣ ಮಹಾಪೂಜೆ ನಡೆಯಿತು .ವಿಶ್ವನಾಥ ಭಂಡಾರಿ ದಂಪತಿ ಪೂಜಾ ವ್ರತ ಕೈಗೊಂಡಿದ್ದರು. ವೆಸ್ಟರ್ನ್ ಇಂಡಿಯಾ ಭಜನಾ ಮಂಡಳಿ ಮತ್ತು ವಿದ್ಯಾದಾಯಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ,ಭುವಾಜಿ ಸತೀಶ್ ಕೋಟ್ಯಾನ್ ರವರಿಂದ ಕಲಶ ಪ್ರತಿಷ್ಠೆ ನಡೆದು ಸಮಿತಿಯ ಸದಸ್ಯರಿಂದ ಹಾಗೂ ವಿವಿಧ ಮಂಡಳಿಗಳ ಆಹ್ವಾನಿತ ಸದಸ್ಯರಿಂದ ಶನಿ ಗ್ರಂಥ ಪಾರಾಯಣ ನಡೆಯಿತು.ಈ ಸಂಧರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಹಾಗೂ ಮುಂಬಯಿ ಬಿಲ್ಲವರ ಎಸೋಸಿಯೇಶನಿನ ನೂತನ ಆದ್ಯಕ್ಷರಾಗಿ ಆಯ್ಕೆಯಾದ ಹರೀಶ್. ಜಿ.ಅಮೀನ್ ಹಾಗೂ ಐರೋಲಿ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಕೋಶಾಧಿಕಾರಿ ಬಂಟ್ವಾಳ ಗಂಗಾಧರ. ಎಸ್. ಬಂಗೇರರವರನ್ನು ಸಮಿತಿಯ ಪದಾಧಿಕಾರಿಗಳು ಶಾಲು ಹೊದಿಸಿ , ಫಲಪುಷ್ಪ ,ಪ್ರಸಾದ ನೀಡಿ ಗೌರವಿಸಿದರು.ನೆರೂಲ್ ಶನೀಶ್ವರ ಮಂದಿರದ ಧರ್ಮದರ್ಶಿ ರಮೇಶ್ ಪೂಜಾರಿ, ಉದ್ಯಮಿ ಪ್ರಶಾಂತ್ ಅಮೀನ್, ಸಾಯಿ ಶ್ರದ್ದಾ ಕ್ಯಾಟರರ್ಸ್ ಶಂಕರ್ ಪೂಜಾರಿ ,ಸ್ಥಳೀಯ ಮಾಜಿ ನಗರಸೇವಕ ಗಣೇಶ್ ಸನಪ್ ಸೇರಿದಂತೆ ಹಲವಾರು ಗಣ್ಯರು, ಉದ್ಯಮಿಗಳು, ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಮಹಾಪೂಜೆಯಲ್ಲಿ ಭಾಗವಹಿಸಿದ್ದರು.ಕೊನೆಗೆ ಮಹಾ ಆರತಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಸಮಿತಿಯ ಅದ್ಯಕ್ಷ ಜೆ.ಜೆ. ಕೋಟ್ಯಾನ್ ಪೂಜಾ ಕಾರ್ಯದಲ್ಲಿ ಸಹಕರಿಸಿದ ಸರ್ವರಿಗೂ ಅಭಾರ ಮನ್ನಿಸಿದರು. ಉಪಾಧ್ಯಕ್ಷ ರವಿ ಸಾಲ್ಯಾನ್, ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ ,ಕೋಶಾಧಿಕಾರಿ ಶರತ್.ಜಿ.ಪೂಜಾರಿ ಹಾಗೂ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಪೂಜಾ ಕಾರ್ಯದಲ್ಲಿ ಸಹಕರಿಸಿದರು.

Related Posts

Leave a Comment