ದಾವಣಗೆರೆ: ಶಾಮನೂರು ಒಡೆತನದ ಕಂಪನಿ ಸಮಸ್ಯೆಯಿಂದ ಬೇಸತ್ತು ರೈತನೊಬ್ಬ, ಅಧಿಕಾರಿಗಳ ಸಮ್ಮುಖದಲ್ಲೇ ವಿಷ ಸೇವಿಸಲು ಯತ್ನಿಸಿರುವ ಘಟನೆ ನಡೆದಿದೆ. ಎಸಿ ಮಮತಾ ಹಿರೇಗೌಡರ್, ಡಿವೈಎಸ್ಪಿ ತಾಮ್ರಧ್ವಜ ಸಮ್ಮುಖದಲ್ಲಿ ಈ ಘಟನೆ ಜರುಗಿದೆ.ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕಬಿದರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಮನೂರು ಶುಗರ್ಸ್ ಮತ್ತು ಡಿಸ್ಲೆರಿ ಕಂಪನಿಯಿಂದ ಹಾರುವ ಬೂದಿಯಿಂದ ಬೇಸತ್ತು ವಿಷ ಕುಡಿಯಲು ಯತ್ನಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ.ಸ್ಥಳಕ್ಕೆ ಭೇಟಿ ನೀಡಿದ ಎಸಿ ಮಮತಾ ಹಿರೇಗೌಡರ್, ಡಿವೈಎಸ್ಪಿ ತಾಮ್ರಧ್ವಜ ಅವರ ಬಳಿ ಅಳಲು ತೋಡಿಕೊಂಡ ರೈತ ಹಾಲೇಶಪ್ಪ, ಇದು 20 ವರ್ಷಗಳ ಕಥೆಯಾಗಿದೆ ಎಂದು ಹೇಳುತ್ತಾ ವಿಷ ಕುಡಿಯಲು ಯತ್ನಿಸಿದ್ದಾನೆ. ಈ ವೇಳೆ ಕೈಯಲ್ಲಿರುವ ವಿಷದ ಬಾಟಲಿಯನ್ನು ಪೋಲಿಸರು ಕಸಿದುಕೊಂಡರು.