Home Kannada ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ

ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ

by Eha

ಶಿವಮೊಗ್ಗ: ಸೋಮಿನಕೊಪ್ಪ ರಸ್ತೆಯ ಚೌಡಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ ನಡೆದಿದೆ. ರಸ್ತೆ ಪಕ್ಕದಲ್ಲಿಯೇ ಇರುವ ಸಣ್ಣ ಗುಡಿಯಲ್ಲಿ ಇರುವ ಚೌಡಮ್ಮ ದೇವಿ ಈ ಭಾಗದ ಆರಾಧ್ಯ ದೇವತೆ. ಇಂದು ಬೆಳಗಿನ ಜಾವ ಕಳ್ಳರು ಗುಡಿಯ ಬೀಗ ಮುರಿದು ದೇವಿಯ ಬೆಳ್ಳಿ ಮುಖವಾಡ ಸೇರಿದಂತೆ ಬೆಳ್ಳಿ ವಸ್ತುಗಳನ್ನು ಹಾಗೂ ಹುಂಡಿಯನ್ನು ಒಡೆದು ಲಕ್ಷಾಂತರ ರೂ. ಕಳ್ಳತನ ಮಾಡಿದ್ದಾರೆ. ಈ ಕುರಿತು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Comment