Home Kannada ಅಂತರಾಷ್ಟ್ರೀಯ ಫುಟ್ಬಾಲ್ ರೆಫ್ರಿ ಎಂ. ಜಿ. ಸುವರ್ಣ ನಿಧನ

ಅಂತರಾಷ್ಟ್ರೀಯ ಫುಟ್ಬಾಲ್ ರೆಫ್ರಿ ಎಂ. ಜಿ. ಸುವರ್ಣ ನಿಧನ

by akash

ಮುಂಬಯಿ : ಗೋರೆಗಾಂವ್ ಪಶ್ಚಿಮದ ನಿವಾಸಿ, ಖ್ಯಾತ ಕ್ರೀಡಾಪಟು ಮಾಧವ ಜಿ. ಸುವರ್ಣ (79) (ಎಂ. ಜಿ. ಸುವರ್ಣ) ಇವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಜ. 6ರಂದು ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಇವರು ಪತ್ನಿ, ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ದೀರ್ಘ ಕಾಲದಿಂದ ಸಕ್ರಿಯರಾಗಿರುವ ವೇದಾವತಿ ಎಂ ಸುವರ್ಣ, ಪುತ್ರರಾದ ನವೀನ್ ಮತ್ತು ನಿತಿನ್, ಪುತ್ರಿ ಲೀನ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಫೀಪಾ ರೆಪ್ರಿಯಂದೇ ಪ್ರಸಿದ್ದರಾಗಿರುವ ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಫುಟ್ಬಾಲ್ ತಂಡಗಳಲ್ಲಿ ರೆಫ್ರಿಯಾಗಿ ಭಾರತವನ್ನು ಪ್ರತಿನಿಧೀಕರಿಸಿದ್ದಾರೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಮುಖ್ಯ ಪ್ರಬಂಧಕರಾಗಿ ನಿವೃತ್ತಿ ಹೊಂದಿದ ನಂತರ ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಕೋಶಾಧಿಕಾರಿಯಾಗಿ ಹಾಗೂ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ನಿಧನಕ್ಕೆ ಗೋರೆಗಾಂವ್ ಕರ್ನಾಟಕ ಸಂಘದ ನೂತನ ಹಾಗೂ ಮಾಜಿ ಕಾರ್ಯಕಾರಿ ಸಮಿತಿ, ಪಾರುಪತ್ಯಗಾರರು, ಉಪಸಮಿತಿಗಳು ಹಾಗೂ ಸಮಿತಿಯ ಸದಸ್ಯರುಗಳು ಸಂತಾಪ ಸೂಚಿಸಿದ್ದಾರೆ.

Related Posts

Leave a Comment

Translate »