Home Kannada ಅಂಧೇರಿ ಪೂರ್ವ ಶ್ರಿ ಶಾಂತದುರ್ಗ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ವರಮಹಾಲಕ್ಷ್ಮಿ ಪೂಜೆಚಿತ್ರ ವರದಿ ದಿನೇಶ್ ಕುಲಾಲ್

ಅಂಧೇರಿ ಪೂರ್ವ ಶ್ರಿ ಶಾಂತದುರ್ಗ ದೇವಸ್ಥಾನದಲ್ಲಿ ಸಂಭ್ರಮದ ಶ್ರೀ ವರಮಹಾಲಕ್ಷ್ಮಿ ಪೂಜೆಚಿತ್ರ ವರದಿ ದಿನೇಶ್ ಕುಲಾಲ್

by akash

ಮುಂಬೈ :ಅಂದೇರಿ ಪೂರ್ವದ ಮಾಲ್ಪ ಡೋಂಗ್ರಿ ರೋಡ್ ನಂಬರ್ 1 ಸುವರ್ಣ ಮಹಾರಾಷ್ಟ್ರ ಹೋಟೆಲ್ ಬಳಿ ಇರುವ  ಶ್ರೀ ಶಾಂತ ದುರ್ಗಾ ದೇವಿಯ ದಿವ್ಯ  ಸನ್ನಿಧಿಯಲ್ಲಿ ದಿನಾಂಕ ರಂದು ಸಂಜೆ  ವರಮಹಾಲಕ್ಷ್ಮಿ ಪೂಜೆಯು ಬಹಳ ವಿಜೃಂಭಣೆಯಿಂದ ನಡೆಯಿತು ,ಸಂಜೆ  ಕಲಶ ಪ್ರತಿಷ್ಠಾಪನೆಯು ಶ್ರೀ ಕ್ಷೇತ್ರದ ಪ್ರದಾನ ಅರ್ಚಕರಾದ ಕೆ. ಪ್ರಸನ್ನ ಪುರೋಹಿತ್ ಇವರು ಕಲಶ ಸ್ಥಾಪನೆ ಮಾಡಿ ಕಲ್ಪೋಕ್ತ ಪೂಜೆ ಮತ್ತು ಶ್ರೀ ವರಮಹಾಲಕ್ಷ್ಮಿ ಅಷ್ಟೋತ್ತರ.  ಪೂಜಾವಿಧಿಗಳು ಪ್ರಾರಂಭಗೊಂಡವು ಪೂಜೆಯ ಯಜಮಾನ್ವತವನ್ನು  ಸವಿತಾ ಸಂತೋಷ್ ಸುವರ್ಣ ಇವರು ವಹಿಸಿದ್ದರು , ಮಹಿಳಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು ನಂತರ ಸಂಪತ್ತಿನ ಅಧಿದೇವತೆಯಾಗಿರುವ ಶ್ರೀ ವರಮಹಾಲಕ್ಷ್ಮಿಗೆ ಮಹಾ ಮಂಗಳಾರತಿ ನಡೆಯಿತು , ಶ್ರೀ ಕ್ಷೇತ್ರದ ಮಹಿಳಾ ಸದಸ್ಯೆಯರು ಶ್ರೀ ಕ್ಷೇತ್ರಕ್ಕೆ ಬಂದಂತಹ ಸುಮಮಂಗಲಿಯರಿಗೆ ಅರಸಿನ .ಕುಂಕುಮ . ತಾಂಬೂಲ. ರವಿಕೆ ಕಣ ನೀಡಿದರು , ಶ್ರೀ ಕ್ಷೇತ್ರದ ಸದಸ್ಯರು ಹಾಗೂ ಸದಸ್ಯೆಯರು ಶ್ರೀ ವರಮಹಾಲಕ್ಷ್ಮಿ ಪೂಜೆಯನ್ನು ಅತ್ಯಂತ ಯಶಸ್ವಿಯಾಗಲು ಸಹಕರಿಸಿದರು.  ಪೂಜೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಶ್ರೀ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ಆನಂದ್ ಜ್ಯೋತಿಷೀಯವರು, ಮತ್ತು ಸದಾನಂದ ಆಚಾರ್ಯ ದಂಪತಿಗಳು ಧನ್ಯವಾದವನ್ನು ಸಮರ್ಪಿಸಿದರು

Related Posts

Leave a Comment