Home Kannada ಅಕ್ಷಯಧಾರ ಕ್ರೆಡಿಟ್ ಸೊಸೈಟಿ ವಾರ್ಷಿಕ ಮಹಾಸಭೆ.

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ವಾರ್ಷಿಕ ಮಹಾಸಭೆ.

by akash

ಕಾಪು ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಸೊಸೈಟಿಯ 12ನೇ ವಾರ್ಷಿಕ ಮಹಾಸಭೆ ನ.30 ರಂದು ಕಾಪು ಭಾಸ್ಕರ ಸೌಧ ದ ಸಭಾಗ್ರಹದಲ್ಲಿ ಅಧ್ಯಕ್ಷರಾದ ಲವ.ಎನ್.ಕರ್ಕೇರಾ ಅವರ ಅಧ್ಯಕ್ಷತೆಯಲ್ಲಿ ಜರಗಿತು. ನಿರ್ದೇಶಕ ಶಿವರಾಮ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಮೊಹಮದ್ ಇರ್ಫಾನ್ ವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರ ಪರಿಶೀಲನೆ ಮಾಡಿ, ಮಂಜೂರು ಮಾಡಲಾಯಿತು. ಗತ ಆರ್ಥಿಕ ವರ್ಷದಲ್ಲಿ ನಿಧನರಾದ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ವ್ಯಾಸರಾಯ ರಾವ್ ಮತ್ತು ಪಿಗ್ಮಿ ಕಲೆಕ್ಷನ್ ಏಜಂಟ್ ಮಹಮದ್ ಫಾಹಿಮ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶೇರುದಾರರ ಪರವಾಗಿ ಪ್ರದೀಪ್ ಕುಮಾರ್, ಸೀತಾಲಕ್ಷ್ಮಿ ವ್ಯಾಸರಾಯ ರಾವ್ ಮಾತನಾಡಿ ಸಲಹೆ-ಸೂಚನೆ ನೀಡಿದರು. ಅಧ್ಯಕ್ಷೀಯ ಭಾಷಣಗೈದ ಲವ ಕರ್ಕೇರಾ ಅವರು “ಕಳೆದ 12 ವರ್ಷಗಳಿಂದ ಅಕ್ಷಯಾಧಾರ ಎಲ್ಲರ ಸಹಕಾರದಿಂದ ಉತ್ತಮ ರೀತಿಯಲ್ಲಿ ವ್ಯವಹಾರ ಮಾಡುತ್ತಾ, ಜನ ಸಾಮಾನ್ಯರ ಆರ್ಥಿಕ ಅಗತ್ಯತೆಗಳಿಗೆ ಸ್ಪಂದಿಸುತ್ತಾ, ಅವರ ಉದ್ಯಮ,ವ್ಯಾಪಾರದ ಅಭಿವೃದ್ಧಿಗೂ ಪ್ರೋತ್ಸಾಹ ನೀಡುತ್ತಿದೆ. ಕೊರೊನಾ ಸಂಕಟದ ಸಮಯದಲ್ಲೂ , ಗ್ರಾಹಕರಿಗೆ, ಠೇವಣೆದಾರರಿಗೆ ಯಾವುದೇ ರೀತಿಯ ಅಡಚಣೆ ಬರದಂತ್ತೆ , ನಮ್ಮ ಸಿಬ್ಬಂದಿ ವರ್ಗ ಶ್ರಮಿಸಿದ್ದಾರೆ. ಮುಂದಿನ ದಿನಗಳಲಲ್ಲೂ ಗ್ರಾಹಕರು, ಶೇರುದಾರರು, ಠೇವಣೆದಾರರು, ಹಿತ ಚಿಂತಕರು ಸಹಕಾರ ನೀಡಿ ಆರ್ಥಿಕ ಸಂಸ್ಥೆಯನ್ನು ಬಲಪಡಿಸಬೇಕು ಎನ್ನುತ್ತಾ 10 ಪ್ರತಿಶತ ಡಿವಿಡೆಂಟ್ ಘೋಷಿಸಿದರು. ಅಕ್ಷಯಧಾರದ ನಿರ್ದೇಶಕರು, ಉಪಾಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಧರ್ಶಿ ಅಮಿತಾ ದೇವದಾಸ ನಿರೂಪಿಸಿ, ವಂದಿಸಿದರು .ಪ್ರಾರಂಭದಲ್ಲಿ ಹರ್ಷಿತ, ಶೆರ್ಲಿ ಪ್ರಾಥನೆಗೈದರು. ಮಹಾಸಭೆಯಲ್ಲಿ ಸೊಸೈಟಿಯ ಶೇರುದಾರರು, ಗ್ರಾಹಕರು, ಠೇವಣೆದಾರರು, ಹಿತೆಷಿಗಳು ಉಪಸ್ಥಿತರಿದ್ದರು.

Related Posts

Leave a Comment

Translate »