Home Kannada ಅಗಲಿದ ತಂದೆ – ತಾಯಿ ನೆನೆದು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ!

ಅಗಲಿದ ತಂದೆ – ತಾಯಿ ನೆನೆದು ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವಕ!

by Eha

ಶಿವಮೊಗ್ಗ: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ಭದ್ರಾ ಕಾಲುವೆ ಹಾರಿ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಭದ್ರಾವತಿ ಹೊಸಮನೆ ಬಡಾವಣೆಯ ಹನುಮಂತ ನಗರದ ನಿವಾಸಿ ಗೌಸ್ ಪೀರ್ (24) ಆತ್ಮಹತ್ಯೆಗೆ ಶರಣಾದ ಯುವಕ. ಗೌಸ್​ ಪೀರ್​ನ ತಂದೆ-ತಾಯಿ ಇಬ್ಬರು ಮೃತರಾಗಿದ್ದು, ಮನೆಯಲ್ಲಿ ಒಬ್ಬಂಟ್ಟಿಯಾಗಿ ವಾಸ ಮಾಡ್ತಿದ್ದ. ತನ್ನ ತಂದೆ-ತಾಯಿಯ ಅಗಲಿಕೆ ನೋವು ಆತನ ಮನಸ್ಸಿಗೆ ಗಾಯಗೊಳಿಸಿತ್ತು. ಮನೆಯಲ್ಲಿ ಒಂಟಿಯಾಗಿದ್ದು, ಯಾರು ತನ್ನ ಜೊತೆಯಲ್ಲಿ ಇಲ್ಲ ಎಂದು ತಿಳಿದ ಗೌಸ್​ ಭದ್ರಾವತಿ ತಾಲೂಕಿನ ಗೊಂದಿಯ ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಂದೆ-ತಾಯಿ ಇಲ್ಲದೇ ಅನಾಥವಾಗಿದ್ದ ಗೌಸ್​ ಶವ ಪತ್ತೆಯಾಗಿದ್ದು, ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Comment