Home Kannada ಅಥಣಿ: ಅಕ್ರಮ ಗಾಂಜಾ ಬೆಳೆದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

ಅಥಣಿ: ಅಕ್ರಮ ಗಾಂಜಾ ಬೆಳೆದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

by Eha

ಅಥಣಿ: ತಾಲೂಕಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ಆರೋಪಿಗೆ ಬೆಳಗಾವಿಯ ಎರಡನೇ ವಿಶೇಷ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಾಲೂಕಿನ ಬಳವಾಡ ಗ್ರಾಮದ ಮೌಲಾಸಾಬ್ ಇಮಾಮಸಾಬ್ ನದಾಫ್ (55), ತನ್ನ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದ. ಈ ಸಂಬಂಧ 09/06/2018ರಲ್ಲಿ ಅಂದಿನ ಡಿಸಿಆರ್​ಬಿ ಬೆಳಗಾವಿ ಪೊಲೀಸ್ ಇನ್ಸ್​ಪೆಕ್ಟರ್​ ಶಂಕರಗೌಡ ವಿ.ಪಾಟೀಲ್ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ 3,36,000 ರೂ.

ಮೌಲ್ಯದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಬೆಳಗಾವಿ ಎರಡನೇ ವಿಶೇಷ ಜಿಲ್ಲಾ ನ್ಯಾಯಾಲಯ ಆರೋಪ ಸಾಬೀತಾಗಿರುವುದರಿಂದ ನ್ಯಾಯಾಧೀಶರಾದ ಜಿ.ನಂಜುಂಡಯ್ಯ 10 ವರ್ಷ ಕಠಿಣ ಕಾರ್ಯಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Related Posts

Leave a Comment