Home Kannada ಅಥಣಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಅಥಣಿ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

by akash

ಅಥಣಿ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸತ್ತಿ ಗ್ರಾಮದಲ್ಲಿ ನಡೆದಿದೆ ರವೀಂದ್ರ ದಾನಸೂರ (44) ಎಂಬವರು ಮನೆ ಪಕ್ಕದ ಶೆಡ್​ನಲ್ಲಿ ನೇಣಿಗೆ ಶರಣಾಗಿದ್ದಾರೆ. ಮೃತ ರೈತ ಸಿಂಡಿಕೇಟ್ ಬ್ಯಾಂಕ್​ನಲ್ಲಿ 5 ಲಕ್ಷ, ಪಿಕೆಪಿಎಸ್ ಬ್ಯಾಂಕ್​ನಲ್ಲಿ 1 ಲಕ್ಷ ಹಾಗೂ ಇತರ ಸ್ವಸಹಾಯ ಸಂಘಗಳ ಮುಖಾಂತರ 3 ಲಕ್ಷ ಸೇರಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಸಾಲ ಹೊಂದಿದ್ದರು ಎಂದು ತಿಳಿದು ಬಂದಿದೆ.ಕೃಷಿ ಜಮೀನು ಸವಳು ಜವಳು ಹೊಂದಿದ್ದರಿಂದ ಸರಿಯಾಗಿ ಬೆಳೆ ಬಾರದೆ ರೈತ ರವೀಂದ್ರ ಅವರು ಸಾಲದ ಶೂಲಕ್ಕೆ ಸಿಲುಕಿದ್ದರು. ಹಾಗಾಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಅಥಣಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Posts

Leave a Comment