Home Kannada ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವು-ಬದುಕಿನ ಮಧ್ಯೆ ಹೋರಾಟ : BU ನಂಬರ್ ಇಲ್ಲದೇ ಮನೆಯಲ್ಲೇ ಚಿಕಿತ್ಸೆ

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾವು-ಬದುಕಿನ ಮಧ್ಯೆ ಹೋರಾಟ : BU ನಂಬರ್ ಇಲ್ಲದೇ ಮನೆಯಲ್ಲೇ ಚಿಕಿತ್ಸೆ

by akash

ಬೆಂಗಳೂರು : ದಿನೇ‌ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ‌ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ.‌ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಹಿಳೆಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಸರಿಯಾದ ಸಮಯಕ್ಕೆ ಸಿಬ್ಬಂದಿ ಕೊರೊನಾ‌ ರಿಪೋರ್ಟ್ ನೀಡುತ್ತಿಲ್ಲ. ಶನಿವಾರ ನನ್ನ ತಾಯಿಗೆ ಮತ್ತಿಕೆರೆಯ ಬಿಬಿಎಂಪಿಯಲ್ಲಿ ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿದ್ದೇನೆ. ಸೋಮವಾರ ಆದರೂ ಕೊರೊನಾ ರಿಪೋರ್ಟ್ ಬಂದಿಲ್ಲ. ಬಿಯು ನಂಬರ್‌ ಇಲ್ಲದೇ ಆಸ್ಪತ್ರೆ ಸಿಬ್ಬಂದಿ ನೋ ಆಡ್ಮಿಟ್ ಅಂತಿದ್ದಾರೆ‌ ಎಂದು ಸೋಂಕಿತೆಯ ಮಗ ಅಳಲು ತೋಡಿಕೊಂಡಿದ್ದಾರೆ. ಸದ್ಯ ಸೋಂಕಿತೆ ಉಸಿರಾಟದ ಸಮಸ್ಯೆಯಿಂದ‌ ಬಳಲುತ್ತಿದ್ದು, ತಾಯಿಯನ್ನ ಉಳಿಸಲು ಮಗನ‌ ಹೋರಾಟ ಮುಂದುವರೆದಿದೆ

Related Posts

Leave a Comment