Home Kannada ಅನಗತ್ಯವಾಗಿ ರಸ್ತೆಗಿಳಿದಿದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವತಿ

ಅನಗತ್ಯವಾಗಿ ರಸ್ತೆಗಿಳಿದಿದ್ದನ್ನು ಪ್ರಶ್ನಿಸಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಯುವತಿ

by akash

ಮೈಸೂರು : ಲಾಕ್​ ಡೌನ್​ ವೇಳೆ ಅನಗತ್ಯವಾಗಿ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಪ್ರಶ್ನಿಸಿದಕ್ಕೆ ಯುವತಿಯೊಬ್ಬಳು ಪೊಲೀಸರೊಡನೆ ವಾಗ್ವಾದ ನಡೆಸಿದ ಘಟನೆ ವಿ.ವಿ ಪುರಂ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಿತು. ನಗರದ ವಾಲ್ಮೀಕಿ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್​ನಲ್ಲಿ ಅನಗತ್ಯವಾಗಿ ಯುವತಿಯೊಬ್ಬಳು ತಿರುಗಾಡುತ್ತಿದ್ದಳು. ಈ ಬಗ್ಗೆ ಪೊಲೀಸರು ಪ್ರಶ್ನಿಸಿದಕ್ಕೆ ರಂಪಾಟ ಶುರು ಮಾಡಿದ್ದಾಳೆ. ಮಹಿಳಾ ಪೊಲೀಸರು ಎಷ್ಟೇ ಶಾಂತವಾಗಿ ವರ್ತಿಸಿದರೂ ಯುವತಿ ಮಾತ್ರ ಏರು ಧ್ವನಿಯಲ್ಲಿ ಮಾತನಾಡುತ್ತಾ ರಂಪಾಟ ಮಾಡಿದ್ದಳು. ಅಲ್ಲದೇ ಪೊಲೀಸರ ಎದುರೇ ಬೈಕ್​ನಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದಳು. ಯುವತಿಯ ಕಿರುಚಾಟಕ್ಕೆ ಬಗ್ಗದ ಪೊಲೀಸರು ದಂಡ ಕಟ್ಟಿಸಿ ಬಿಟ್ಟಿದ್ದಾರೆ.

Related Posts

Leave a Comment