Home Kannada ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಬಸ್​ನಲ್ಲೇ ಸಾವು: ಟೋಲ್ ಬಳಿ ಶವ ಇಳಿಸಿ ಹೋದ ಚಾಲಕ

ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಬಸ್​ನಲ್ಲೇ ಸಾವು: ಟೋಲ್ ಬಳಿ ಶವ ಇಳಿಸಿ ಹೋದ ಚಾಲಕ

by Eha

ನೆಲಮಂಗಲ:ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಬಸ್​ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಸಾವನ್ನಪ್ಪಿದ್ದು, ಶವವನ್ನು ಟೋಲ್ ಬಳಿಯೇ ಬಿಟ್ಟು ಬಸ್ ಚಾಲಕ ತೆರಳಿರುವ ಘಟನೆ ನಡೆದಿದೆ. ನೆಲಮಂಗಲದ ನವಯುಗ ಟೋಲ್ ಬಳಿ ಘಟನೆ ನಡೆದಿದ್ದು, ತುಮಕೂರು ಕಡೆಯಿಂದ ಬೆಂಗಳೂರಿಗೆ ಬರುವ ಖಾಸಗಿ ಬಸ್​​​​ನಲ್ಲಿ ಬಿಹಾರದ ಮೂಲದ ಯುವಕ ಪ್ರಯಾಣಿಸುತ್ತಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಪ್ರಯಾಣದ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಇದನ್ನು ಕಂಡ ಬಸ್​​​​ನ ಚಾಲಕ ಶವವನ್ನು ನೆಲಮಂಗಲ ನವಯುಗ ಟೋಲ್ ಬಳಿ ಇಳಿಸಿ ಹೋಗಿದ್ದಾನೆ, ಟೋಲ್ ಬಳಿ ನಾಲ್ಕು ತಾಸಿಗೂ ಹೆಚ್ಚು ಸಮಯ ಶವ ಅಲ್ಲಿಯೇ ಬಿದ್ದಿದ್ದು, ಕೊರೊನಾ ಎರಡನೇ ಅಲೆಯ ಆತಂಕದಿಂದ ಶವದ ಬಳಿ ಯಾರೂ ಸಹ ಹೋಗುವ ಧೈರ್ಯ ಮಾಡಿಲ್ಲ ಎಂದು ಹೇಳಲಾಗುತ್ತಿದೆ.

Related Posts

Leave a Comment