Home Kannada ಆಂಧ್ರಪ್ರದೇಶದಲ್ಲಿ ರಸ್ತೆ ಅಪಘಾತ: ಉಳ್ಳಾಲದ ವ್ಯಕ್ತಿ ಸಾವು

ಆಂಧ್ರಪ್ರದೇಶದಲ್ಲಿ ರಸ್ತೆ ಅಪಘಾತ: ಉಳ್ಳಾಲದ ವ್ಯಕ್ತಿ ಸಾವು

by Eha

ಉಳ್ಳಾಲ: ಆಂಧ್ರಪ್ರದೇಶದಲ್ಲಿ ನಡೆದ ಲಾರಿ ಅಪಘಾತದಲ್ಲಿ ಉಳ್ಳಾಲ‌ ಮೂಲದ ಓರ್ವ ಮೃತಪಟ್ಟಿದ್ದು, ಮತ್ತೋರ್ವ ಗಂಭೀರ ಗಾಯಗೊಂಡಿದ್ದಾನೆ. ಇನ್ನುಳಿದ ವ್ಯಕ್ತಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿಯಲ್ಲಿದ್ದ ಹರೇಕಳ ಐಕು ನಿವಾಸಿ ಮಹಮ್ಮದ್ ರವೂಫ್ (22) ಸ್ಥಳದಲ್ಲೇ ಸಾವನ್ನಪ್ಪಿದ್ದು, ಶಾಕಿರ್ ಎಂಬಾತ ಗಂಭೀರ ಗಾಯಗೊಂಡಿದ್ದಾನೆ.

ಒಡಿಶಾದಿಂದ ಮಂಗಳೂರು ಕಡೆ ಮೀನು ಸಾಗಾಟ ಮಾಡುತ್ತಿದ್ದ ಲಾರಿ ಆಂಧ್ರಪ್ರದೇಶದಲ್ಲಿ ಬುಧವಾರ ತಡರಾತ್ರಿ ಅಪಘಾತಕ್ಕೀಡಾಗಿದೆ. ಮಂಗಳೂರು ಮಾರುಕಟ್ಟೆಗೆ ಮೀನು ತರುವ ಲಾರಿ ಬುಧವಾರ ಬೆಳಗ್ಗೆ ಒಡಿಶಾ ಮೀನುಗಾರಿಕಾ ಬಂದರಿನಿಂದ ಹೊರಟಿದ್ದು, ಸುಮಾರು 450 ಕಿ.ಮೀ. ಸಂಚಾರ ನಡೆಸಿ ಆಂಧ್ರ ಮಾರ್ಗವಾಗಿ ಮಂಗಳೂರು ಕಡೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಮೃತ ರವೂಫ್ ಸಂಬಂಧಿಕರು ಬೆಂಗಳೂರಿಗೆ ತೆರಳಿದ್ದು, ಆಂಧ್ರಪ್ರದೇಶದಿಂದ ಬೆಂಗಳೂರು‌ ಮಾರ್ಗವಾಗಿ ಮೃತದೇಹವನ್ನು ಮಂಗಳೂರಿಗೆ ತರಲಿದ್ದು ಶುಕ್ರವಾರ ಮೃತದೇಹ ಹರೇಕಳ ತಲುಪಲಿದೆ.

Related Posts

Leave a Comment