Home Kannada ಆರೋಪಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ

ಆರೋಪಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ

by akash

ಹೈದರಾಬಾದ್(ತೆಲಂಗಾಣ): ಸೈದಾಬಾದ್​ನಲ್ಲಿ ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪ ಹೊತ್ತಿದ್ದ ಆರೋಪಿ ಪಲ್ಲಂಕೊಂಡ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. ರೈಲು ಹಳಿಗೆ ಬಿದ್ದು ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕೈ ಮೇಲಿನ ಹಚ್ಚೆಯ ಆಧಾರದ ಮೇಲೆ ರಾಜುವನ್ನು ಗುರ್ತಿಸಲಾಗಿದೆ. ಸೆಪ್ಟೆಂಬರ್ 9ರಂದು ಹೈದರಾಬಾದ್​ನ ಸೈದಾಬಾದ್​ನಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಬಾಲಕಿಯನ್ನು ಕೊಲೆಗೈದು ಆರೋಪಿ ಕಾಣೆಯಾಗಿದ್ದ. ಪೊಲೀಸರು ಆತನಿಗಾಗಿ ಸಾಕಷ್ಟು ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದು, ಉಪ್ಪಲ್ ಪ್ರದೇಶದಲ್ಲಿ ನಿನ್ನೆ ಸುತ್ತಾಡಿದ್ದನು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪೊಲೀಸರು ಈತನ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನವನ್ನೂ ಘೋಷಿಸಿದ್ದರು. ಆರೋಪಿಯ ಆತ್ಮಹತ್ಯೆ ದೃಢಪಡಿಸಿದ ಕೆಟಿಆರ್ ಮತ್ತು ಪೊಲೀಸರು ಆರೋಪಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ತೆಲಂಗಾಣ ಡಿಜಿಪಿ ಸ್ಪಷ್ಟನೆ ನೀಡಿದ್ದಾರೆ. ಅತ್ಯಾಚಾರ ಆರೋಪಿಯ ಮೃತದೇಹ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ದೇಹದ ಮೇಲಿನ ಗುರುತುಗಳ ಮೂಲಕ ಆತನ ಗುರುತು ಪತ್ತೆ ಹಚ್ಚಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Related Posts

Leave a Comment

Translate »