Home Kannada ಆಹಾರ ಅರಸಿ ಗೂಡಿಗೆ ನುಗ್ಗಿದ ಹಾವು; ಮರಿ ಕಾಪಾಡುವಲ್ಲಿ ಫಲ ನೀಡದ ಹಕ್ಕಿಯ ಪ್ರಯತ್ನ

ಆಹಾರ ಅರಸಿ ಗೂಡಿಗೆ ನುಗ್ಗಿದ ಹಾವು; ಮರಿ ಕಾಪಾಡುವಲ್ಲಿ ಫಲ ನೀಡದ ಹಕ್ಕಿಯ ಪ್ರಯತ್ನ

by Eha

ಹಂಪಿಯಲ್ಲಿ ಕೆರೆ ಹಾವೊಂದು ಮರಕುಟಿಗ ಹಕ್ಕಿಯ ಗೂಡಿಗೆ ನುಗ್ಗಿ ಮರಿಯನ್ನು ನುಂಗಿದ ದೃಶ್ಯವನ್ನು ಮಂಜುನಾಥ ಕೆಂಪಣ್ಣವರ್ ಎಂಬವರು ತಮ್ಮ ಮೊಬೈಲ್​​​ನಲ್ಲಿ ಸೆರೆ ಹಿಡಿದಿದ್ದಾರೆ. ತನ್ನ ಮರಿಯನ್ನು ಉಳಿಸಿಕೊಳ್ಳಲು ತಾಯಿ ಹಕ್ಕಿ ಹಾವಿನೊಂದಿಗೆ ಕಾದಾಟ ನಡೆಸುತ್ತದೆ. ತನ್ನ ಕೊಕ್ಕಿನಲ್ಲಿ ಹಾವಿನ ದೇಹವನ್ನು ಗಾಯಗೊಳಿಸಿ ಓಡಿಸುವ ಪ್ರಯತ್ನ ಮಾಡುತ್ತದೆ. ಆದರೆ ಕೆಲವೇ ನಿಮಿಷದಲ್ಲಿ ಹಾವು ಮರಿಯನ್ನು ಕಚ್ಚಿಕೊಂಡು ಮರದಿಂದ ಕೆಳಗಿಳಿಯಿತು. ಇದಾದ ಬಳಿಕ ಮರಕುಟಿಗ ಹಕ್ಕಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ.

Related Posts

Leave a Comment