Home Kannada ಇನ್ನೊಬ್ಬರ ಜೊತೆ ಮೊಬೈಲ್‌ನಲ್ಲಿ ಚಾಟ್‌… ಪ್ರೇಯಸಿಯ ಮೇಲೆ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ!

ಇನ್ನೊಬ್ಬರ ಜೊತೆ ಮೊಬೈಲ್‌ನಲ್ಲಿ ಚಾಟ್‌… ಪ್ರೇಯಸಿಯ ಮೇಲೆ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ!

by akash

ಮೈಸೂರು: ಪ್ರೇಯಸಿಯ ನಡತೆ ಪ್ರಶ್ನಿಸಿ ಪ್ರಿಯಕರನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಹರ್ಷ ರಸ್ತೆಯಲ್ಲಿ ನಡೆದಿದೆ. ನಂಜನಗೂಡಿನ ಶ್ರೀರಾಂಪುರದ 26 ವರ್ಷದ ಯುವತಿ ಪ್ರಿಯಕರನಿಂದ ಹಲ್ಲೆಗೊಳಗಾದ ಯುವತಿ. ಹೆಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯ ನಿವಾಸಿ ರಮೇಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಮೈಸೂರಿನ ಖಾಸಗಿ ಮಾಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಗೂ ರಮೇಶ್ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೆಗೆ ಬರುತ್ತಿದ್ದ ಮೆಸೇಜ್​ಗಳನ್ನು ತನ್ನ ಮೊಬೈಲ್​​ಗೆ ಬರುವಂತೆ ರಮೇಶ್ ಮಾಡಿಕೊಂಡಿದ್ದ. ಕೆಲವು ಯುವಕರ ಜೊತೆ ಯುವತಿ ಚಾಟ್ ಮಾಡಿದ್ದರಿಂದ ಈಕೆಯ ವಿರುದ್ಧ ತಿರುಗಿ ಬಿದ್ದು, ನಡತೆ ಬಗ್ಗೆ ರಮೇಶ್ ಶಂಕೆ ವ್ಯಕ್ತಪಡಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಈತ, ಲವ್ ಬ್ರೇಕ್​​ಅಪ್​​ ಮಾತುಕತೆ ನಡೆಸುವುದಾಗಿ ಯುವತಿಯನ್ನು ಕರೆಸಿ ಚಾಕುವಿನಿಂದ ಇರಿದಿದ್ದಾನೆ. ಸಾರ್ವಜನಿಕರೇ ಆರೋಪಿ ರಮೇಶ್​ನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿ, ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment