Home Kannada ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರಿಪ್ರಸಾದ್ ನಂದಳಿಕೆ ಆಯ್ಕೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹರಿಪ್ರಸಾದ್ ನಂದಳಿಕೆ ಆಯ್ಕೆ.

by Eha

ಬೆಳ್ಮಣ್ : ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಯುವ ಪತ್ರಕರ್ತ, ರಂಗ ಕಲಾವಿದ ಹರಿಪ್ರಸಾದ್ ನಂದಳಿಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ವಿಜಯಾ ಕಲಾವಿದರು ಕಿನ್ನಿಗೋಳಿ ನಾಟಕ ತಂಡದ ಹಾಸ್ಯ ಕಲಾವಿದರಾಗಿದ್ದು, ಬೆಳ್ಮಣ್ ಜೇಸಿಐ ಸಂಸ್ಥೆಯ ಸದಸ್ಯರಾಗಿದ್ದು, ಶ್ರೀ ಗುರುದುರ್ಗಾ ಮಿತ್ರ ಮಂಡಳಿ , ನಂದಳಿಕೆ ಬೋರ್ಡು ಶಾಲಾ ಹಳೆ ವಿದ್ಯಾರ್ಥಿ ಸಂಘ, ಮುಲ್ಕಿ ವಲಯ ಪತ್ರಕರ್ತರ ಸಮೂಹ ಹಾಗೂ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಸದಸ್ಯರಾಗಿದ್ದು, ತುಳುವ ಸಿರಿ ಕಲಾವಿದರು ಬೆಳ್ಮಣ್ ನಾಟಕ ತಂಡದ ರೂವಾರಿಯಾಗಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಬೆಳ್ಮಣ್ ಹೋಬಳಿಯ ಕಾರ್ಯದರ್ಶಿಯಾಗಿ ಮತ್ತು ವಿವಿಧ ಸಂಘ ಸಂಸ್ಥೆಯಲ್ಲಿ ಸಕ್ರೀಯರಾಗಿದ್ದಾರೆ. ಇತ್ತಿಚೆಗೆ ಉಡುಪಿಯಲ್ಲಿ ಜರುಗಿದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ವಾರ್ತಾಧಿಕಾರಿ ಮಂಜುನಾಥ್ ಹಾಗೂ ಅವರ ತಂಡ ನಡೆಸಿಕೊಟ್ಟಿದ್ದು. ಹರಿಪ್ರಸಾದ್ ನಂದಳಿಕೆ ಅವಿರೋಧವಾಗಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.

Related Posts

Leave a Comment