Home Kannada ಉಡುಪಿ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಬಿ.ನಾಗರಾಜ್ ನೇಮಕ.

ಉಡುಪಿ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಬಿ.ನಾಗರಾಜ್ ನೇಮಕ.

by akash

ಉಡುಪಿ ಜಿಲ್ಲೆಯ ವಕೀಲರ ಪ್ರತಿಷ್ಟಿತ ಸಂಸ್ಥೆ ಉಡುಪಿ ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಖ್ಯಾತ ನ್ಯಾಯವಾದಿ ಬಿ.ನಾಗರಾಜ್ ಅವರು ಆಯ್ಕೆಯಾಗಿದ್ದಾರೆ.ಇತ್ತೀಚೆಗೆ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2021-22, 2022-23 ರ ಸಾಲಿಗೆ ಬಿ.ನಾಗರಾಜ್ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಬಿ.ದಿನೇಶ್ ಶೆಟ್ಟಿ, ಪ್ರಧಾನ ಕಾರ್ಯಧರ್ಶಿಯಾಗಿ ರೋನಾಲ್ಡ್ ಪ್ರವೀಣ್ ಅವರನ್ನು ನೇಮಕ ಮಾಡಲಾಯಿತು.ಈ ಸಂಧರ್ಭ ನಮ್ಮ ಪ್ರತಿನಿಧಿ ಪ್ರೇಮ್ ಲಾಲ್ ಅವರೊಂದಿಗೆ ತನ್ನ ಅನಿಸಿಕೆಗಳನ್ನು ತಿಳಿಸಿದ ಬಿ.ನಾಗರಾಜ್ ಅವರು “ಕಳೆದ ಹಲವಾರು ವರ್ಷಗಳಿಂದ ನಮ್ಮ ಸಂಸ್ಥೆಗೆ ಚುನಾವಣೆ ಮೂಲಕ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ ಚುನಾವಣೆ ಇಲ್ಲದೆ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯಧರ್ಶಿ ನೇಮಕಗೊಂಡಿರುವುದು ಬಹಳ ಸಂತೋಷ, ನನಗೆ ಒಳ್ಳೆಯ ಟೀಮ್ ಸಿಕ್ಕಿದೆ. ಕೋವಿಡ್ ನಲ್ಲಿ ಜ್ಯೂನಿಯರ್ ನ್ಯಾಯವಾದಿಗಳು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ,ಕಮಿಟಿಯ ಸಲಹೆ ಸ್ವೀಕರಿಸಿ ಎಲ್ಲರಿಗೂ ಮೆಚ್ಚಿಗೆ ಆಗುವಂತೆ ನನ್ನ ಸಾಮರ್ಥ್ಯಕನುಗುಣವಾಗಿ ಕರ್ತವ್ಯ ನಿರ್ವಹಿಸುವೆ” ಎಂದರು. ಸರಳ,ಮೃದು ಸ್ವಭಾವದ ,ಕ್ರಿಯಾಶೀಲ ನ್ಯಾಯವಾದಿ ಬಿ.ನಾಗರಾಜ್ ಅವರ ಅಧ್ಯಕ್ಷವಧಿಯಲ್ಲಿ ಉಡುಪಿ ಜಿಲ್ಲಾ ವಕೀಲರ ಸಂಘದ ಕಾರ್ಯವೈಖರಿ ಎಲ್ಲರ ಪ್ರಶಂಸೆಗಳಿಸಲಿ.

Related Posts

Leave a Comment

Translate »