Home Kannada ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ- ಪತ್ನಿ, ಪುತ್ರ, ಗೆಳೆಯನಿಗೆ ಜೀವಾವಧಿ ಶಿಕ್ಷೆ

ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ- ಪತ್ನಿ, ಪುತ್ರ, ಗೆಳೆಯನಿಗೆ ಜೀವಾವಧಿ ಶಿಕ್ಷೆ

by akash

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಮೂವರು ಕೊಲೆಗಾರರಿಗೆ ಜೀವಾವಧಿ ಶಿಕ್ಷೆ ನೀಡಿ ಉಡುಪಿ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ. 2016 ರ ಜುಲೈ 28 ರಂದು ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಪತ್ನಿ ರಾಜೇಶ್ವರಿ ನವನೀತ್ ಶೆಟ್ಟಿ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದರು. ರಾಜೇಶ್ವರಿ ಗೆಳೆಯ ನಿರಂಜನ ಭಟ್ ಜೊತೆ ಸೇರಿ ನಂದಳಿಕೆಯ ಮನೆಯಲ್ಲಿ ಇರುವ ಹೋಮಕುಂಡದಲ್ಲಿ ಸುಟ್ಟು ಹಾಕಿದ್ದರು. ಎಲುಬು ಮತ್ತು ಮೂಳೆ ಪಕ್ಕದ ಹೊಳೆಗೆ ಎಸೆದು ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಲಾಗಿತ್ತು. ಭಾಸ್ಕರ್ ಶೆಟ್ಟಿ ತಾಯಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ತನ್ನ ಮಗ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿ ಪತ್ನಿ ಪುತ್ರನ ವಿಚಾರಣೆಗೊಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಿಐಡಿ ತನಿಖೆ ಕೂಡ ಆಗಿತ್ತು. ನಾಲ್ಕು ವರ್ಷ 11 ತಿಂಗಳುಗಳ ಕಾಲ ಸುದೀರ್ಘ ವಾದ-ಪ್ರತಿವಾದ ನಡೆದು ಎಂದು ಕೋರ್ಟು ತೀರ್ಪು ಪ್ರಕಟಿಸಿದೆ.ಪ್ರಮುಖ ಆರೋಪಿಗಳಾಗಿರುವ ಪತ್ನಿ ರಾಜೇಶ್ವರಿ ಪುತ್ರ ನವನೀತ್ ಶೆಟ್ಟಿ ರಾಜೇಶ್ವರಿ ಗೆಳೆಯ ನಿರಂಜನ ದೋಷಿ ಎಂದು ಜಿಲ್ಲಾ ನ್ಯಾಯಾಲಯದ ನ್ಯಾಯಾದೀಶ ಸುಬ್ರಹ್ಮಣ್ಯ ಜೆ.ಎನ್ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾಗಿ ನ್ಯಾಯವಾದಿ ಶಾಂತರಾಮ್ ಶೆಟ್ಟಿ ಭಾಸ್ಕರ ಶೆಟ್ಟಿ ಕುಟುಂಬದ ಪರ ವಾದ ಮಂಡಿಸಿದ್ದರು.

Related Posts

Leave a Comment