Home Kannada ಒಳ ಉಡುಪು ಸೇರಿದಂತೆ ಬಟ್ಟೆಗಳಲ್ಲಿ ಚಿನ್ನ ಸಾಗಣೆ: ಬರೋಬ್ಬರಿ 92 ಲಕ್ಷ ಮೌಲ್ಯದ ಚಿನ್ನ ವಶ

ಒಳ ಉಡುಪು ಸೇರಿದಂತೆ ಬಟ್ಟೆಗಳಲ್ಲಿ ಚಿನ್ನ ಸಾಗಣೆ: ಬರೋಬ್ಬರಿ 92 ಲಕ್ಷ ಮೌಲ್ಯದ ಚಿನ್ನ ವಶ

by Eha

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಭಾರಿ ಪ್ರಮಾಣದ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಉಳ್ಳಾಲದ ಮೊಹಮ್ಮದ್ ಆಸೀಫ್ ಎಂಬ ವ್ಯಕ್ತಿ ಅಕ್ರಮವಾಗಿ ಚಿನ್ನ ಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತ ಇಂದು ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದನು. ಈತನನ್ನು ತಪಾಸಣೆ ಮಾಡಿದ ಕಸ್ಟಮ್ಸ್ ಅಧಿಕಾರಿಗಳಿಗೆ 1.993 ಕೆಜಿ ಚಿನ್ನ ಪೌಡರ್ ರೂಪದಲ್ಲಿ ಸಿಕ್ಕಿದೆ.

ಇದರ‌ ಮೌಲ್ಯ ರೂ 92.27 ಲಕ್ಷ ಎಂದು ಅಂದಾಜಿಸಲಾಗಿದ್ದು, ವ್ಯಕ್ತಿ ಚಿನ್ನವನ್ನು ವಿಶೇಷವಾಗಿ ಡಿಸೈನ್ ಮಾಡಲಾದ ಒಳ ಉಡುಪು, ಜೀನ್ಸ್ ಪ್ಯಾಂಟ್ ಮತ್ತು ‌ಮೊಣಕಾಲು ಬ್ಯಾಂಡ್ ಮೂಲಕ ಸಾಗಣೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಸದ್ಯ ಕಸ್ಟಮ್ ಅಧಿಕಾರಿಗಳು ಚಿನ್ನ ಮತ್ತು ಪ್ರಯಾಣಿಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Related Posts

Leave a Comment