Home Kannada ಕರ್ನಾಟಕ ಮಹಾಮಂಡಲ ಮೀರಾಭಾಯಂದರ್ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮ.ಕಾರ್ಯಕ್ರಮದ ಸಾಂಕೇತಿಕ ಆಚರಣೆ ಅನಿವಾರ್ಯ….ಡಾ. ಅರುಣೋದಯ ರೈ.ಚಿತ್ರ ವರದಿ: ಉಮೇಶ್ ಕೆ.ಅಂಚನ್

ಕರ್ನಾಟಕ ಮಹಾಮಂಡಲ ಮೀರಾಭಾಯಂದರ್ ವತಿಯಿಂದ ಹಳದಿಕುಂಕುಮ ಕಾರ್ಯಕ್ರಮ.ಕಾರ್ಯಕ್ರಮದ ಸಾಂಕೇತಿಕ ಆಚರಣೆ ಅನಿವಾರ್ಯ….ಡಾ. ಅರುಣೋದಯ ರೈ.ಚಿತ್ರ ವರದಿ: ಉಮೇಶ್ ಕೆ.ಅಂಚನ್

by Eha

ಭಾಯಂದರ್.ಮಾ.30. ಕರ್ನಾಟಕ ಮಹಾಮಂಡಲದ ಮಹಿಳಾ ವಿಭಾಗವು ಪ್ರತೀ ವರ್ಷ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮವನ್ನು ಬಹಳ ವಿಜ್ರಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸುತ್ತಿತ್ತು. ಇಡೀ ವಿಶ್ವಕ್ಕೆ ಪಸರಿಸಿದ ಕೊರೊನಾ ಮಹಾಮಾರಿಯಿಂದ ಸರಕಾರದ ಆದೇಶದಂತೆ ಸರ್ವ ಕಾರ್ಯಕ್ರಮಗಳನ್ನು ಸಾಂಕೇತಿಕವಾಗಿ ಆಚರಿಸುವಲ್ಲಿ ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಸಾಂಗವಾಗಿ ನಡೆಯುವಲ್ಲಿ ಭಗವಂತನು ಅನುಗ್ರಹಿಸಲಿ ಎಂದು ಕರ್ನಾಟಕ ಮಹಾಮಂಡಲದ ಗೌರವಾಧ್ಯಕ್ಷ ಹಾಗೂ ಭಾಯಂದರ್ ಸೈಂಟ್ ಅಗ್ನಿಸ್ ಇಂಗ್ಲಿಷ್ ಹೈಸ್ಕೂಲಿನ ಕಾರ್ಯಾಧ್ಯಕ್ಷ ಡಾ.ಅರುಣೋದಯ ರೈ ಹೇಳಿದರು.. ಅವರು ಮಾ.29ರಂದು ಕರ್ನಾಟಕ ಮಹಾಮಂಡಲ ಮೀರಾಭಾಯಂದರಿನ ಮಹಿಳಾ ವಿಭಾಗವು ಸೈಂಟ್ ಅಗ್ನಿಸ್ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು ಈ ಸಂಧರ್ಭದಲ್ಲಿ ಇತ್ತೀಚೆಗೆ ನಿಧನರಾದ ಮಹಾಮಂಡಲದ ಸ್ಥಾಪಕ ಸದಸ್ಯ ರಮೇಶ್ ಶೆಟ್ಟಿಯವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮೀರಾಭಾಯಂದರ್ ಬಂಟರಸಂಘದ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ನೂತನ ಕಾರ್ಯಾದ್ಯಕ್ಷೆ ಶಾಲಿನಿ ಶೆಟ್ಟಿ ಹಾಗೂ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮಹಾಮಂಡಲದ ಗೌರವ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ದಂಪತಿಯನ್ನು ಶಾಲು, ಹೂಗುಚ್ಚ ನೀಡಿ ಅಭಿನಂದಿಸಲಾಯಿತು. ಸಮಾರಂಭಕ್ಕೆ ಆಗಮಿಸಿದ್ದ ಸಮಾಜಸೇವಕಿ ವಸಂತಿ ಶೆಟ್ಟಿ, ಬಂಟರಸಂಘದ ಮೀರಾಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಅಮಿತಾ ಕಿಶೋರ್ ಶೆಟ್ಟಿ, ಲೇಖಕಿ ಲತಾ ಸಂತೋಷ್ ಶೆಟ್ಟಿ, ಆರಾಧನಾ ಫ್ರೆಂಡ್ಸ್ ನ ಅದ್ಯಕ್ಷೆ ಪ್ರೇಮಾ ಎಮ್.ಹೆಗ್ಡೆ, ಪರಿಸರದ ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕರ್ನಾಟಕ ಮಹಾಮಂಡಲದ ಸರ್ವ ಪದಾಧಿಕಾರಿಗಳನ್ನು ಮತ್ತು ಕಾರ್ಯಕ್ರಮಕ್ಕೆ ವಿವಿಧ ರೂಪದಲ್ಲಿ ಸಹಕರಿಸಿದ ಪೋಷಕರನ್ನು ಸತ್ಕರಿಸಲಾಯಿತು. ಮಹಾಮಂಡಲದ ಮಹಿಳಾ ವಿಭಾಗದ ಕಾರ್ಯದ್ಯಕ್ಷೆ ಸುಮಂಗಳ ಕಣಂಜಾರು ಮಾತನಾಡುತ್ತಾ ಚಂದ್ರಶೇಖರ ಶೆಟ್ಟಿಯವರ ಮುಂದಾಳತ್ವದಲ್ಲಿ 17 ವರ್ಷಗಳ ಹಿಂದೆ ಸ್ಥಾಪಿತ ಕರ್ನಾಟಕ ಮಹಾಮಂಡಲವು ಪ್ರತೀವರ್ಷ ಉತ್ತಮ ಸಮಾಜಪರ ಕಾರ್ಯಕ್ರಮಗಳನ್ನು ಆಯೋಜಿಸಿ ಖ್ಯಾತಿಯನ್ನು ಪಡೆದಿದೆ . ಮಹಿಳೆಯರ ಸೌಭಾಗ್ಯದ ಕುರುಹಾದ ಕುಂಕುಮ ಹಾಗೂ ರೋಗನಿರೋಧಕ ಶಕ್ತಿಯ ಹಳದಿಯು ಸರ್ವರ ಜೀವನದಲ್ಲಿ ಸದಾ ಬಳಕೆಯಲ್ಲಿರಲಿ ಎಂದು ಶುಭಹಾರೈಸಿದರು. ಕೊರೊನಾ ಮಹಾಮಾರಿಯ ಸರಕಾರದ ಸೂಚನೆಗಳನ್ನು ಸರ್ವರೂ ಖಡ್ಡಾಯವಾಗಿ ಪಾಲಿಸಬೇಕೆಂದು ವಿನಂತಿಸಿದರು. ಸಂಸ್ಥೆಯ ಅದ್ಯಕ್ಷ ರವಿಕಾಂತ್ ಶೆಟ್ಟಿ ಇನ್ನ, ಉಪಾಧ್ಯಕ್ಷ ಸುಭಾಷ್ ಶೆಟ್ಟಿ. ಗೌ.ಕಾರ್ಯದರ್ಶಿ ಶಿರ್ವ ಪ್ರವೀಣ್ ಶೆಟ್ಟಿ ,ಕೋಶಾಧಿಕಾರಿ ಗುಣಪಾಲ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಜತೆ ಕಾರ್ಯದರ್ಶಿ ಹೇಮಾವತಿ ಎಸ್. ಹೆಗ್ಡೆ, ಕೋಶಾಧಿಕಾರಿ ಅನುಷಾ ಶೆಟ್ಟಿ, ಜತೆ ಕೋಶಾಧಿಕಾರಿ ಯಶವಂತಿ ಶೆಟ್ಟಿ, ಭಜನಾ ಸಮಿತಿಯ ಅದ್ಯಕ್ಷೆ ಸುಮತಿ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯೆಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು. ದೀಪ ಪ್ರಜ್ವಲನೆ,ಮಹಿಳಾ ಸದಸ್ಯರಿಂದ ಭಜನೆ ,ಹಳದಿ ಕುಂಕುಮ ಹಾಗೂ ಮಹಾಮಂಗಳಾರತಿ ನಡೆಯಿತು. ಮಹಿಳಾ ವಿಭಾಗದ ಕಾರ್ಯದರ್ಶಿ ನಯನಾ ಆರ್. ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕಿ ಆಶಾ ಶೆಟ್ಟಿ ವಂದಿಸಿದರು.

Related Posts

Leave a Comment