Home Kannada ಕಲಬುರಗಿಯಲ್ಲಿ‌ ಮತ್ತೆ ಹರಿದ ನೆತ್ತರು: ಬೈಕ್ ಅಡ್ಡಗಟ್ಟಿ ಲ್ಯಾಬ್ ಟೆಕ್ನಿಷಿಯನ್ ಬರ್ಬರ ಹತ್ಯೆ

ಕಲಬುರಗಿಯಲ್ಲಿ‌ ಮತ್ತೆ ಹರಿದ ನೆತ್ತರು: ಬೈಕ್ ಅಡ್ಡಗಟ್ಟಿ ಲ್ಯಾಬ್ ಟೆಕ್ನಿಷಿಯನ್ ಬರ್ಬರ ಹತ್ಯೆ

by akash

ಕಲಬುರಗಿ : ಲ್ಯಾಬ್ ಟೆಕ್ನಿಷಿಯನ್‌ ಅನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ‌ ಇಲ್ಲಿನ ಕನಕ ನಗರದಲ್ಲಿ ನಡೆದಿದೆ. ಅಪ್ಪಾ ಸಾಹೇಬ್ (32) ಕೊಲೆಯಾದ ವ್ಯಕ್ತಿ. ಸಂಗಮನಾಥ ಕಾಲೋನಿ ನಿವಾಸಿಯಾಗಿದ್ದ ಈತ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ. ನಿನ್ನೆ ರಾತ್ರಿ ಬೈಕ್​ನಲ್ಲಿ ಕನಕ ನಗರದ ಖಾಸಗಿ ಶಾಲೆಯ ಪಕ್ಕದಲ್ಲಿ ಹೋಗುವಾಗ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಆರ್. ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ‌ ಪೊಲೀಸರು ಬಲೆ ಬಿಸಿದ್ದಾರೆ. ಕಳೆದ ಒಂದು ತಿಂಗಳ ಜಿಲ್ಲೆಯಲ್ಲಿ ನಡೆದ ಎಂಟನೇ ಕೊಲೆ ಇದಾಗಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.

Related Posts

Leave a Comment

Translate »