Home Kannada ಕಲಬುರಗಿಯಲ್ಲಿ ಆಟೋ ಚಾಲಕನ ಕೊಲೆ ಪ್ರಕರಣ: ಮೂವರ ಬಂಧನ

ಕಲಬುರಗಿಯಲ್ಲಿ ಆಟೋ ಚಾಲಕನ ಕೊಲೆ ಪ್ರಕರಣ: ಮೂವರ ಬಂಧನ

by akash

ಕಲಬುರಗಿ: ಆಟೋ ಚಾಲಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ರೋಜಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೈಟ್ ಕರ್ಫ್ಯೂ ಇದ್ದರೂ ಸಹ ಇದೇ ತಿಂಗಳು 20ರಂದು ರಾತ್ರಿ 10.30ರ ಸುಮಾರಿಗೆ ಆಟೋ ಚಾಲಕ ಮಿಲತ್ ನಗರದ ನಿವಾಸಿ ಜಿಶಾನ್ ಎಂಬ 25 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಗೈಯಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಲೆ ಹಾಕಿದ್ದರು. ಸದ್ಯ ನದೀಮ್ ಅಲಿಯಾಸ್​ ನದೀಮಪಾಶಾ (26), ನಯಿಮ್ (25) ಹಾಗೂ ರಹೀಮ್ ಮುನ್ನಾಶೇಖ (22)ನನ್ನು ಬಂಧಿಸಿದ್ದಾರೆ. ಎಲ್ಲರೂ ಕಲಬುರಗಿಯ ಕಮಾಲೆ ಮುಜರತ್ ದರ್ಗಾ ಬಳಿಯ ಯಾದುಲ್ಲಾ ಕಾಲೋನಿ ನಿವಾಸಿಗಳಾಗಿದ್ದಾರೆ.

Related Posts

Leave a Comment