Home Kannada ಕಲಬುರಗಿ: ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಸಿಸಿಬಿ

ಕಲಬುರಗಿ: ಪಿಸ್ತೂಲ್ ಮಾರಾಟ ಜಾಲ ಭೇದಿಸಿದ ಸಿಸಿಬಿ

by Eha

ಕಲಬುರಗಿ: ನಗರದಲ್ಲಿ ಪಿಸ್ತೂಲ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸ್ಪೆಷಲ್ ಕ್ರೈಂ ಬ್ರಾಂಚ್​ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂ ಬಿ ನಗರ ಠಾಣಾ ವ್ಯಾಪ್ತಿಯ ಸೌಭಾಗ್ಯ ಕಲ್ಯಾಣ ಮಂಟಪ ಬಳಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಲಬುರಗಿ ನಿವಾಸಿಗಳಾದ ಅಬು ಮೌಲಾನಾ, ಸದ್ದಾಂ, ಮಹಮ್ಮದ್​ ‌ಆಸಿಫ್​, ಅಬ್ದುಲ್ ಮನ್ನಾನ್, ಇನಿಯಾಸ್ ಅಲಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಎರಡು ಪಿಸ್ತೂಲ್, ಎರಡು ಜೀವಂತ ಗುಂಡು, ಇನ್ನೋವಾ ಕಾರು ಸೇರಿದಂತೆ ನಾಲ್ಕೈದು ಮೊಬೈಲ್ ಫೋನ್​ ಜಪ್ತಿ ಮಾಡಿದ್ದಾರೆ. ಮತ್ತೋರ್ವ ಆರೋಪಿ ಸಲ್ಮಾನ್ ಎಂಬಾತ ಪರಾರಿಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ. ಈ ಕುರಿತು ಎಂ ಬಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment