Home Kannada ಕಾಂಗ್ರೆಸ್ ಶಾಸಕಿ ಕಲಾವತಿ ಕೊರೊನಾದಿಂದ ಸಾವು

ಕಾಂಗ್ರೆಸ್ ಶಾಸಕಿ ಕಲಾವತಿ ಕೊರೊನಾದಿಂದ ಸಾವು

by akash

ಭೋಪಾಲ್: ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಜೋಬಟ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಕಲಾವತಿ ಭೂರಿಯಾ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 10 ದಿನಗಳಿಂದ ಕಲಾವತಿ ಅವರಿಗೆ ಸೋಂಕು ದೃಢಪಟ್ಟಿತ್ತು. ಅಂದಿನಿಂದ ಇಂದೋರ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಕಲಾವತಿಯವರು ಝಾಬುವಾ ಕ್ಷೇತ್ರದ ಶಾಸಕ ಕಾಂತಿಲಾಲ್ ಅವರ ಸೊಸೆ. ಝಾಬುವಾ ಜಿಲ್ಲಾ ಪಂಚಾಯ್ತಿಯಲ್ಲಿ 15 ವರ್ಷ ಅಧ್ಯಕ್ಷರಾಗಿದ್ದರು. ಯುವ ಕಾಂಗ್ರೆಸ್ ಪ್ರದೇಶ ಅಧ್ಯಕ್ಷ, ವಿಕ್ರಾಂತ್ ಭೂರಿಯಾ ಸೋದರಿಯ ಸಾವನ್ನ ಖಚಿತಪಡಿಸಿದ್ದಾರೆ. ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಪಶ್ಚಿಮ ಕ್ಷೇತ್ರದ ಶಾಸಕ ಸುರೇಶ್ ಶ್ರೀವಾತ್ಸವ್ ಕೊರೊನಾಗೆ ಬಲಿಯಾಗಿದ್ದಾರೆ. ಕಳೆದ ಏಳು ದಿನಗಳಿಂದ ಸುರೇಶ್ ಶ್ರೀವಾತ್ಸವ್ ಅವರನ್ನ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸುರೇಶ್ ಶ್ರೀವಾತ್ಸವ್ ಅವರಿಗೆ 76 ವರ್ಷ ವಯಸ್ಸು ಆಗಿತ್ತು.

Related Posts

Leave a Comment