Home Kannada ಕಾಣೆಯಾಗಿದ್ದ ಮಹಿಳೆ ಶವ ಆರು ತುಂಡುಗಳಾಗಿ ಪತ್

ಕಾಣೆಯಾಗಿದ್ದ ಮಹಿಳೆ ಶವ ಆರು ತುಂಡುಗಳಾಗಿ ಪತ್

by Eha

ರಾಂಚಿ: ನದಿಯ ದಂಡೆಯಲ್ಲಿ ಮಹಿಳೆಯ ಶವವನ್ನು ಆರು ತುಂಡುಗಳಾಗಿ ಕತ್ತರಿಸಿ ಎಸೆದಿರುವ ಘಟನೆ ಜಾಖರ್ಂಡ್‍ನ ಪಕೂರ್ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಸೋನಾ ಮರಂಡಿ(45) ಎಂದು ಗುರುತಿಸಲಾಗಿದೆ. ಈಕೆ ಫೆಬ್ರವರಿ 24 ರಿಂದ ಕಾಣೆಯಾಗಿದ್ದಾಳೆ. ಸೋನಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಆರು ತುಂಡುಗಳನ್ನಾಗಿ ಮಾಡಿ ಕೊಲೆ ಮಾಡಲಾಗಿದೆ. ಮಹಿಳೆ ದೇಹ ರಕ್ತ ಸಿಕ್ತವಾಗಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕತ್ತರಿಸಿ ಬಿದ್ದಿರುವ ಕಾಲನ್ನು ಗಮನಿಸಿದ ಗ್ರಾಮಸ್ಥರು ಮಾಹಿತಿ ನೀಡಿದ್ದರು. ನಾವು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದಾಗ ಮಹಿಳೆಯ ತುಂಡು ತುಂಡಾದ ದೇಹ ಪತ್ತೆಯಾಗಿದೆ. ಮಹಿಳೆಯ ಕತ್ತರಿಸಿದ ತಲೆ, ಮುಂಡ, ಕೈ ಮತ್ತು ಕಾಲುಗಳು ಕಂಡುಬಂದಿವೆ ಎಂದು ಪೊಲೀಸ್ ಅಧಿಕಾರಿ ಮನೋಜ್ ಕುಮಾರ್ ತಿಳಿಸಿದ್ದಾರೆ. ಮಹಿಳೆಯ ಮಗ ಮನೋಜ್ ಹನ್ಸದ್ ತನ್ನ ತಾಯಿಯ ದೇಹ ಎಂದು ಗುರುತಿಸಿದ್ದಾನೆ. ನನ್ನ ತಾಯಿ ಮಾರ್ಚ್ 3 ರಂದು ಕಾಣೆಯಾಗಿದ್ದಳು ಎಂದು ಹೇಳಿದ್ದಾನೆ. ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಬಗ್ಗೆ ತನಿಖೆ ಆರಂಭಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.

Related Posts

Leave a Comment