Home Kannada ಕಾಫಿ ನಾಡಲ್ಲಿ ಗಾಂಜಾ ಘಮಲು: ಆರೋಪಿ ಬಂಧಿಸಿ, 2 ಲಕ್ಷ ಮೌಲ್ಯದ ಮಾಲು ಜಪ್ತಿ

ಕಾಫಿ ನಾಡಲ್ಲಿ ಗಾಂಜಾ ಘಮಲು: ಆರೋಪಿ ಬಂಧಿಸಿ, 2 ಲಕ್ಷ ಮೌಲ್ಯದ ಮಾಲು ಜಪ್ತಿ

by akash

ಚಿಕ್ಕಮಗಳೂರು: ಮಾದಕ ವಸ್ತು ಗಾಂಜಾ ಮಾರಾಟದಲ್ಲಿ ತೊಡಗಿದ್ದ ವಿಜಯ್‌ ಎಂಬಾತನನ್ನು ಚಿಕ್ಕಮಗಳೂರು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ. ಕೊಪ್ಪ ತಾಲೂಕಿನ ಜಯಪುರದ ಆಟೋ ನಿಲ್ದಾಣದ ಸಮೀಪ ಓರ್ವ ವ್ಯಕ್ತಿಯ ಬಳಿ ಗಾಂಜಾ ಹಾಗೂ ಹಶೀಶ್ ಎಣ್ಣೆ ಇರುವ ಬಗ್ಗೆ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ದೊರೆತಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ಮುಜಾಮ್ಮಿಲ್ ಎಂಬಾತ ಪರಾರಿಯಾಗಿದ್ದಾನೆ. ಸುಮಾರು 8 ಕೆ.ಜಿ 790 ಗ್ರಾಂ ಗಾಂಜಾ ಹಾಗೂ 200 ಗ್ರಾಂ ಹಶೀಶ್ ಎಣ್ಣೆಯನ್ನು ವಶಕ್ಕೆ ಪಡೆದಿದ್ದು, ಇದರ ಅಂದಾಜು ಮೌಲ್ಯ 2.75 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Comment