Home Kannada ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ. ಸಾಯಿತತ್ವ ಪರಿಪಾಲನೆಯೇ ಸಮಿತಿಯ ಉದ್ದೇಶ… ಮಾಧವ ಯಸ್. ಶೆಟ್ಟಿ. ವರದಿ: ಉಮೇಶ್ ಕೆ.ಅಂಚನ್.

ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ ವಾರ್ಷಿಕ ಮಹಾಸಭೆ. ಸಾಯಿತತ್ವ ಪರಿಪಾಲನೆಯೇ ಸಮಿತಿಯ ಉದ್ದೇಶ… ಮಾಧವ ಯಸ್. ಶೆಟ್ಟಿ. ವರದಿ: ಉಮೇಶ್ ಕೆ.ಅಂಚನ್.

by Eha

ಕೊರೊನಾ ಮಹಾಮಾರಿಯ ತೊಂದರೆಯಿಂದ ಜಗತ್ತೇ ಕಂಪಿಸಿದೆ.ಮಹಾಮಾರಿಯ ತೊಂದರೆಯಲ್ಲಿ ಸಿಲುಕಿದ ಪರಿಸರದ ಹಲವಾರು ಬಡ ಕುಟುಂಬಗಳಿಗೆ ಸಮಿತಿಯು ಆರ್ಥಿಕ ನೆರವು ನೀಡಿ ಸಹಕರಿಸಿದೆ. ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ವೈದ್ಯಕೀಯ ನೆರವು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಬಲೆಯರಿಗೆ ಉಚಿತ ಹೊಲಿಗೆ ತರಬೇತಿ ಮೊದಲಾದ ಸಮಿತಿಯ ಸಮಾಜಹಿತ ಯೋಜನೆಗಳು ಜಾರಿಯಲ್ಲಿವೆ. ಶ್ರೀ ಸಾಯಿ ತತ್ವಗಳ ಪರಿಪಾಲನೆಯೊಂದಿಗೆ ಭಕ್ತಿ ಹಾಗೂ ಸೇವಾಭಾವನೆಯಿಂದ ಸಮಾಜ ಸೇವೆಯಲ್ಲಿ ಭಾಗಿಯಾಗುವ ಉದ್ದೇಶವನ್ನಿಟ್ಟು ಮುನ್ನಡೆಯೋಣ ಎಂದು ಶ್ರೀ ಸಾಯಿಬಾಬಾ ಪೂಜಾ ಸಮಿತಿ, ಕಾಲಘೋಡಾದ ಅದ್ಯಕ್ಷ ಮಾಧವ ಎಸ್.ಶೆಟ್ಟಿ ಹೇಳಿದರು ಹಾಗೂ ಈ ಮಹಾಮಾರಿಯು ಆದಷ್ಟು ಬೇಗ ಜಗತ್ತಿನಿಂದ ದೂರವಾಗಿ ಸರ್ವರಿಗೂ ಸುಖ ಶಾಂತಿ ಲಬಿಸಲಿ ಎಂದು ಶ್ರೀ ಸಾಯಿಯಲ್ಲಿ ಪ್ರಾರ್ಥಿಸಿದರು. ಅವರು ಫೆ.28ರಂದು ಬೊರಿವಿಲಿ ಚುಕ್ಕುವಾಡಿಯ ಸಮಿತಿಯ ಉಪಕಛೇರಿಯಲ್ಲಿ ನಡೆದ ಸಮಿತಿಯ 26ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
.ಕೋಶಾಧಿಕಾರಿ ಆರ್.ಡಿ.ಶೇಣವ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ಪ್ರೊಫೆಸರ್ ಕೆ.ಎಚ್.ಕರ್ಕೇರ ಓದಿ ಸಮಿತಿಯ ಮುಂದಿನ ಕಾರ್ಯ ಕಲಾಪಗಳ ಬಗ್ಗೆ ವಿವರಿಸಿದರು. ಸರಕಾರದ ಆದೇಶವನ್ನು ಪರಿಪಾಲಿಸಿ ಮೂರು ತಿಂಗಳ ನಂತರ ಸಮಿತಿಯ ಸುವರ್ಣ ಮಹೋತ್ಸವವನ್ನು ಆಚರಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.ಕ್ರಷ್ಣ ನಾಯಕ್ ಎಂಡ್ ಕಂಪನಿಯವರನ್ನು ಮುಂದಿನ ವರ್ಷದ ಲೆಕ್ಕ ಪರಿಶೋಧಕರನ್ನಾಗಿ ನೇಮಿಸಲಾಯಿತು. ಮಹಾಸಭೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಅಡ್ವೆ ಜಯ ಎಸ್. ಶೆಟ್ಟಿ ಸ್ವಾಗತಿಸಿ ಸುಧಾಕರ ಶೆಟ್ಟಿ ವಂದಿಸಿದರು. ಶ್ರೀ ಸಾಯಿಯ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಪೂಜೆ ಸಲ್ಲಿಸಿ ಮಹಾಸಭೆಗೆ ಚಾಲನೆ ನೀಡಲಾಯಿತು.

Related Posts

Leave a Comment