Home Kannada ಕಿರು ಅರಣ್ಯಕ್ಕೆ ಬೆಂಕಿ: ಅರಣ್ಯದಂಚಿನ ರೈತನಿಗೆ ಬರೆ

ಕಿರು ಅರಣ್ಯಕ್ಕೆ ಬೆಂಕಿ: ಅರಣ್ಯದಂಚಿನ ರೈತನಿಗೆ ಬರೆ

by Eha

ಮೈಸೂರು: ನಂಜನಗೂಡು ತಾಲೂಕಿನ ಕೋಣನೂರು ಕಿರು ಅರಣ್ಯ ಪ್ರದೇಶದಲ್ಲಿ ಬೆಂಕಿ ಬಿದ್ದ ಪರಿಣಾಮ, ಕಾಡಂಚಿನ ಪ್ರದೇಶದಲ್ಲಿದ್ದ ರೈತನಿಗೂ ಬರೆ ಬಿದ್ದಿದೆ. ಕೋಣನೂರು ಗ್ರಾಮದ ರಂಗಯ್ಯ ಎಂಬುವರು ತಮ್ಮ ಒಂದು ಎಕರೆ ಜಮೀನಿನಲ್ಲಿ ಹಾಕಿದ್ದ ಬಾಳೆ ಬೆಳೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಗಾಳಿಯ ವೇಗ ಹೆಚ್ಚಾದ ಪರಿಣಾಮ ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ವಿಫಲವಾದ ಹಿನ್ನೆಲೆಯಲ್ಲಿ ಗ್ರಾಮದ ಅಂಚಿನಲ್ಲಿರುವ ಕಿರು ಅರಣ್ಯ ಹಾಗೂ ಬೆಟ್ಟಕ್ಕೆ ಬೆಂಕಿ ಬಿದ್ದು ಕಾಡು ಭಸ್ಮವಾಗಿದೆ. ಅರಣ್ಯದಂಚಿನ ಜಮೀನಿಗೂ ಜ್ವಾಲಾಗ್ನಿ ವ್ಯಾಪಿಸಿದ್ದರಿಂದ ಗ್ರಾಮದ ರಂಗಯ್ಯ ಎಂಬುವವರಿಗೆ ಸೇರಿದ ಒಂದು ಎಕರೆ ಬಾಳೆ ಬೆಳೆ ಸಂಪೂರ್ಣ ಭಸ್ಮವಾಗಿದೆ. ಜಮೀನಿನಲ್ಲಿದ್ದ ಬಾಳೆ ಬೆಳೆಯ ಜತೆಗೆ ಹನಿ ನೀರಾವರಿಯ ಪೈಪ್ ಮತ್ತು ಸಲಕರಣೆಗಳೂ ಬೆಂಕಿಗಾಹುತಿಯಾಗಿವೆ. ಬೆಂಕಿಯ ಅವಘಡದಿಂದ ರೈತನಿಗೆ ಲಕ್ಷಾಂತರ ರೂ. ನಷ್ಟವಾಗಿದ್ದು, ಸರ್ಕಾರದಿಂದ ಸೂಕ್ತ ಪರಿಹಾರ ನೀಡುವಂತೆ ರೈತ ರಂಗಯ್ಯ ಒತ್ತಾಯಿಸಿದ್ದಾರೆ.

Related Posts

Leave a Comment