Home Kannada ಕುಡಿಯೋಕೆ ಹಣ ಕೊಡದ ಅಮ್ಮ.. ಹೆತ್ತ ತಾಯಿಯನ್ನೇ ಕೊಂದ ವಿಶೇಷಚೇತನ ಮಗ!

ಕುಡಿಯೋಕೆ ಹಣ ಕೊಡದ ಅಮ್ಮ.. ಹೆತ್ತ ತಾಯಿಯನ್ನೇ ಕೊಂದ ವಿಶೇಷಚೇತನ ಮಗ!

by Eha

ಕಲಬುರಗಿ: ಮದ್ಯ ಸೇವನೆಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಹೆತ್ತವಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಇಂದು ನಸುಕಿನ ಜಾವ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲೂರ ಕೆ. ಗ್ರಾಮದಲ್ಲಿ ನಡೆದಿದೆ. ಭೀಮಬಾಯಿ ಪೂಜಾರಿ (75) ಕೊಲೆಯಾದ ತಾಯಿ. ಈಕೆಯ ಕಿರಿಯ ಪುತ್ರ ಯಲ್ಲಪ್ಪ ಪೂಜಾರಿ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ಶನಿವಾರ ನಸುಕಿನ ಜಾವ ಆರೋಪಿಯ ಹಿರಿಯ ಸಹೋದರ ಶರಣಪ್ಪ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಮನೆಯೊಳಗೆ ಕೊಂಡಿ ಹಾಕಿಕೊಂಡು ತಾಯಿ ಬಳಿ ಕುಡಿತಕ್ಕಾಗಿ ಹಣಕ್ಕೆ ಪೀಡಿಸಲು ಪ್ರಾರಂಭಿಸಿದ್ದಾನೆ. ಹಣ ಕೊಡದೇ ಇದ್ದಾಗ ಪಕ್ಕದಲ್ಲಿದ್ದ ಕಲ್ಲನ್ನು ತಾಯಿಯ ತಲೆ ಮೇಲೆ ಮೂರ್ನಾಲ್ಕು ಬಾರಿ ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಕೊಲೆ ಪಾತಕಿ ಯಲ್ಲಪ್ಪ ವಿಶೇಷಚೇತನನಾಗಿದ್ದು, ಆತನನ್ನು ಗ್ರಾಮಸ್ಥರು ಕೂಡಿ ಹಾಕಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ರಾಜಕುಮಾರ ಜಾಮಗೊಂಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Related Posts

Leave a Comment