Home Kannada ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ವೈಭವದಿಂದ ಜರುಗಿದ `ಕುಲಾಲ ಸಮ್ಮಿಲನ’ ಬಡತನದಲ್ಲಿರುವ ಕಟ್ಟ ಕಡೆಯ ವ್ಯಕ್ತಿ ಕಣ್ಣೀರು ಒರೆಸುವ ಕೆಲಸ ಮಾಡಿದರೆ ಸಂಘ ಸಂಸ್ಥೆಯ ಸ್ಥಾಪನೆ ಸಾರ್ಥಕವಾಗುತ್ತದೆ ಶ್ರೀ ಮೋಹನದಾಸ ಸ್ವಾಮೀಜಿ

ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ವೈಭವದಿಂದ ಜರುಗಿದ `ಕುಲಾಲ ಸಮ್ಮಿಲನ’ ಬಡತನದಲ್ಲಿರುವ ಕಟ್ಟ ಕಡೆಯ ವ್ಯಕ್ತಿ ಕಣ್ಣೀರು ಒರೆಸುವ ಕೆಲಸ ಮಾಡಿದರೆ ಸಂಘ ಸಂಸ್ಥೆಯ ಸ್ಥಾಪನೆ ಸಾರ್ಥಕವಾಗುತ್ತದೆ ಶ್ರೀ ಮೋಹನದಾಸ ಸ್ವಾಮೀಜಿ

by Eha

ಮಂಗಳೂರು ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕುಲಾಲ ಸಂಘದ ಅಧ್ಯಕ್ಷರು ಹಲವು ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿದ್ದಾರೆ. ಇದರಲ್ಲಿ ಕುಂಭ ಕಲಾ ಮಂಡಳಿ ಸ್ಥಾಪನೆ ಕೂಡ ಒಂದಾಗಿದ್ದು, ಉಪ ಮುಖ್ಯಮಂತ್ರಿಗಳು ಈ ಬೇಡಿಕೆಯನ್ನು ಸದ್ಯವೇ ಈಡೇರಿಸುವ ಭರವಸೆ ನೀಡಿದ್ದಾರೆ. ಕುಲಾಲ ಸಂಘದ ಹಾಸ್ಟೆಲ್ ಸ್ಥಾಪನೆಗೆ ಜಾಗ ಮಂಜೂರು ಮಾಡಲು ಸರಕಾರದ ವತಿಯಿಂದ ಸದ್ಯದ ಪರಿಸ್ಥಿಯಲ್ಲಿ ಅಸಾಧ್ಯವಾಗಿದ್ದು, ಜಾಗದ ಅನುಕೂಲತೆ ಇದ್ದಲ್ಲಿ ಕಟ್ಟಡಕ್ಕಾಗಿ ಅನುದಾನ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದರು. ಮಾಜಿ ಸಚಿವ ರಮಾನಾಥ ರೈ, ಮ.ನ.ಪಾ ಮೇಯರ್ ದಿವಾಕರ ಪಾಂಡೇಶ್ವರ, ಮೂಲ್ಕಿ ಮೂಡಬಿದ್ರೆ ಶಾಸಕ ಶ್ರೀ ಉಮಾನಾಥ ಕೋಟ್ಯಾನ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮನಪಾ ಸದಸ್ಯ ಕಿಶೋರ್ ಕೊಟ್ಟಾರಿ, ಸಂತೋಷ್ ಕುಮಾರ್ ರೈ ಬೋಳ್ಯಾರು, ಪೃಥ್ವಿರಾಜ್ ಎಡಪದವು, ತೇಜಸ್ವಿರಾಜ್ ಮೊದಲಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಪುರುಷೋತ್ತಮ ಕಲ್ಬಾವಿ, ಸಂತೋಷ್ ಕುಲಾಲ್ ಪಕ್ಕಾಲು, ಶ್ರೀ ಸುಂದರ ಬಿ.ಬಂಗೇರ, ರವೀಂದ್ರ ಮುನ್ನಿಪ್ಪಾಡಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕುಲಾಲ ಸಮಾಜದ ಸಾಧಕರಾದ ಸಹಕಾರಿ ಧುರೀಣ ಶ್ರೀ ಬಿ.ಎಸ್ ಕುಲಾಲ್ ಪುತ್ತೂರು, ಸಾಮಾಜಿಕ ಧಾರ್ಮಿಕ ಮುಂದಾಳು, ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ಬಂಗೇರ, ಹಿರಿಯ ಸೇವಕಿ ಶ್ರೀಮತಿ ಮಾಲತಿ, ಹಿರಿಯ ಪತ್ರಕರ್ತರಾದ ಚಿದಂಬರ ಬೈಕಂಪಾಡಿ ಅವರನ್ನು ಗಣ್ಯರ ಸಮ್ಮುಖ ಸನ್ಮಾನಿಸಲಾಯಿತು. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆಗೆ ಸಮಾಜದ ವಿವಿಧ ರಾಜಕೀಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕ್ಷೇತ್ರದ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಜರುಗಿತು. ಕನ್ನಡ ನಾಡು, ನುಡಿಯ ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಜನಪದಕಲೆಗಳ ಶ್ರೀಮಂತಿಕೆ ವೇದಿಕೆಯಲ್ಲಿ ಅನಾವರಣಗೊಂಡಿತು.ಲ| ಅನಿಲ್ ದಾಸ್ (ಗೌರವ ಸಂಚಾಲಕರು, ಕುಲಾಲ ಸಮ್ಮಿಲನ ಸ್ವಾಗತ ಸಮಿತಿ), ಗಿರೀಶ್ ಕೆ.ಎಚ್ (ಸಂಚಾಲಕರು, ಕುಲಾಲ ಸಮ್ಮಿಲನ ಸ್ವಾಗತ ಸಮಿತಿ), ದಯಾನಂದ ಅಡ್ಯಾರ್ (ಉಪಾಧ್ಯಕ್ಷರು, ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ), ಜೈರಾಜ್ ಪ್ರಕಾಶ್ (ಉಪಾಧ್ಯಕ್ಷರು ಯಾನೆ ಕುಲಾಲರ ಮಾತೃ ಸಂಘ), ಚಂದ್ರಕಾAತ್ (ಪ್ರಧಾನ ಕಾರ್ಯದರ್ಶಿ ದ.ಕ ಜಿಲ್ಲಾ ಯಾನೆ ಕುಲಾಲರ ಮಾತೃ ಸಂಘ), ಮೊದಲಾದವರು ಕಾರ್ಯಕ್ರಮದ ಯಶಸ್ಸಿನ ಹಿಂದೆ ದುಡಿದರು. ಎಚ್ ಕೆ ನಯನಾಡು, ನವೀನ್ ಕುಲಾಲ್ ಪುತ್ತೂರು, ಪ್ರವೀಣ್ ಬಸ್ತಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ದ.ಕ., ಉಡುಪಿ, ಕಾಸರಗೋಡು ಜಿಲ್ಲೆ ಹಾಗೂ ಹೊರನಾಡ ಕುಲಾಲ ಬಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.ಸ್ವಾಭಿಮಾನದ ಬದುಕು ಹಾಗೂ ಸಂಘಟಿತ ಸಮಾಜದ ಇರಾದೆಯಿಂದ ನಮ್ಮ ಸಮಾಜ ಬಲಯುತವಾಗಿದೆ. ಇದಕ್ಕಾಗಿ ಯುವ ಸಮುದಾಯ ತಮ್ಮ ಕೌಶಲದೊಂದಿಗೆ ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯುವ ಜನತೆ ಡ್ರಗ್ಸ್ ಮಾಫಿಯಾಕ್ಕೆ ಸಿಲುಕಿ ಹದಿ ತಪ್ಪುತ್ತಿರುವುದು ಕಳವಳಕಾರಿ ಬೆಳವಣಿಗೆ. ನಮ್ಮ ಸಮಾಜದ ಹೆಣ್ಮಕ್ಕಳ ರಕ್ಷಣೆ ನಾವು ಕಟಿಬದ್ಧರಾಗಿರಬೇಕು. ವೀರನಾರಾಯಣ ದೇವಸ್ಥಾನ, ದೇವಿ ದೇವಸ್ಥಾನ ಕುಲಾಲರ ನಮ್ಮ ಅಸ್ಮಿತೆಯ ಹೆಗ್ಗುರುತು.- ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿಕುಲಾಲ ಮಾತೃ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ವಿದ್ಯಾನಿಧಿ, ಕ್ರೀಡಾನಿಧಿ, ಸಾಂಸ್ಕೃತಿಕ ನಿಧಿ, ಮಗುವಿನ ದತ್ತು ನಿಧಿ, ಅಶಕ್ತರ ನಿಧಿ ಸ್ಥಾಪಿಸುವುದರೊಂದಿಗೆ ಬಡ ಹೆಣ್ಣು ಮಕ್ಕಳಿಗೆ ಸಾಮೂಹಿಕ ವಿವಾಹ ಹಮ್ಮಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗ್ರಾಮೀಣ ಭಾಗದಿಂದ ಉದ್ಯೋಗ ಅರಸಿ ಬರುವ ಸ್ವಜಾತಿ ಬಾಂಧವರಿಗೆ ಮಂಗಳೂರಿನಲ್ಲಿ ವಸತಿ ನಿಲಯ ಸ್ಥಾಪಿಸುವ ಯೋಜನೆ ರೂಪಿಸಲಾಗುವುದು. ಸರಕಾರದ ವತಿಯಿಂದ ಇದಕ್ಕಾಗಿ ಕನಿಷ್ಠ ಐವತ್ತು ಸೆಂಟ್ಸ್ ಜಾಗ ಹಾಗೂ ಎರಡು ಕೋಟಿ ರೂ ಅನುದಾನ ನೀಡುವಂತೆ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು ಹಾಗೂ ಉದ್ಯೋಗದ ದೃಷ್ಟಿಯಿಂದ ಮೆಡಿಕಲ್ ಕಾಲೇಜು ಅಥವಾ ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟುವ ಸಾಮರ್ಥ್ಯ ನಮ್ಮಲ್ಲಿಲ್ಲ ಆದರೆ ಕನಿಷ್ಠ ಒಂದು ಐಟಿಐ ಸ್ಥಾಪಿಸುವ ಕನಸು ನಮ್ಮಲ್ಲಿದೆ.

-ಮಯೂರ್ ಉಳ್ಳಾಲ್

Related Posts

Leave a Comment