Home Kannada ಕೆಲಸ ಕೊಡಿಸುವುದಾಗಿ ವಂಚನೆ ಆರೋಪ: ವ್ಯಕ್ತಿಗೆ ಥಳಿತ – ವಿಡಿಯೋ ವೈರಲ್

ಕೆಲಸ ಕೊಡಿಸುವುದಾಗಿ ವಂಚನೆ ಆರೋಪ: ವ್ಯಕ್ತಿಗೆ ಥಳಿತ – ವಿಡಿಯೋ ವೈರಲ್

by Eha

ಮಂಗಳೂರು: ಶಾಸಕರ ಹೆಸರು ಹೇಳಿಕೊಂಡು ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿ ವಂಚನೆಗೈದ ಆರೋಪಿಗೆ ಜನರು ಥಳಿಸಿರುವ ವಿಡಿಯೋ ವೈರಲ್ ಆಗಿದೆ. ನಗರದ ಹೊರವಲಯದ ಪುನರೂರು ಎಂಬಲ್ಲಿನ ಜೀತು ಶೆಟ್ಟಿ ಅಲಿಯಾಸ್ ಅಜಯ್ ಶೆಟ್ಟಿ ಎಂಬಾತ, ತನಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಪರಿಚಯ ಇದೆ ಎಂದು ಏಳೆಂಟು ಮಂದಿಗೆ ನಂಬಿಸಿದ್ದಾನೆ. ಎಫ್​ಬಿ ಮುಖಾಂತರ ಅವರನ್ನು ಪರಿಚಯಿಸಿಕೊಂಡು ತಾಲೂಕು ಆಫೀಸ್ ನಲ್ಲಿ ಕೆಲಸ ದೊರಕಿಸುವ ಭರವಸೆ ನೀಡಿದ್ದಾನೆ. ಅಲ್ಲದೆ ಉದ್ಯೋಗಾಕಾಂಕ್ಷಿಗಳಿಂದ 30 ಸಾವಿರ ರೂ. ನಿಂದ 2 ಲಕ್ಷ ರೂ. ವರೆಗೂ ಹಣ ಪಡೆದು ವಂಚನೆ ಮಾಡಿದ್ದಾನೆಂದು ಆರೋಪಿಸಿ ನಾಲ್ಕೈದು ಜನ ಯುವಕರು ಬೆಲ್ಟ್ ಹಾಗೂ ಕೈಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ತುಳುವಿನಲ್ಲಿ ಮಾತನಾಡುವ ಈ ವಿಡಿಯೋದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುವುತ್ತಿರುವುದು ಕೇಳಿ ಬರುತ್ತಿದೆ. ಅಲ್ಲದೆ ಈತ ಮಹಿಳೆಯರಿಗೂ ವಂಚನೆ ಮಾಡಿದ್ದಾನೆಂದೂ ವಿಡಿಯೋ ಮಾತುಕತೆಯಲ್ಲಿ ತಿಳಿದು ಬರುತ್ತಿದೆ. ಈತ ಇದೀಗ ಹಾಸನದ ಯುವತಿಯನ್ನು ಮದುವೆಯಾಗಿದ್ದು, ಆಕೆಯೂ ಈ ಕೃತ್ಯದಲ್ಲಿ ಭಾಗಿಯಾಗಿದ್ದಾಳೆಂದು ತಿಳಿದು ಬಂದಿದೆ.

Related Posts

Leave a Comment