Home Kannada ಕೊಡವೂರು ಶ್ರೀ ಸಾಯಿಬಾಬಾ ಮಂದಿರದಲ್ಲಿ ಮಕ್ಕಳಿಗಾಗಿ ದಾಸರ ಪದಗಳ ಸ್ಪರ್ಧೆ.

ಕೊಡವೂರು ಶ್ರೀ ಸಾಯಿಬಾಬಾ ಮಂದಿರದಲ್ಲಿ ಮಕ್ಕಳಿಗಾಗಿ ದಾಸರ ಪದಗಳ ಸ್ಪರ್ಧೆ.

by akash

ಮಕ್ಕಳಿಗಾಗಿ ದಾಸರ ಪದಗಳ ಸ್ಪರ್ಧೆ. ದಿ. ಉಗ್ಗುದೇವಿ ನಾರಾಯಣರ ಮಕ್ಕಳ ಕಾರ್ಯ ಶ್ಲಾಘನೀಯ – ದಿವಾಕರ ಶೆಟ್ಟಿ. ಉಡುಪಿ. ಸೆ.18.ಪಡುಬಿದ್ರಿ ನಡಿಪಟ್ಣ ಮೊಗವೀರ ಮಹಿಳಾ ಮಂಡಳಿ ಹಾಗೂ ದಿ. ಉಗ್ಗುದೇವಿ ನಾರಾಯಣರ ಮಕ್ಕಳ ಜಂಟಿ ಆಶ್ರಯದಲ್ಲಿ ಮಲ್ಪೆಯಿಂದ ಹೆಜಮಾಡಿ ಕೋಡಿ ವರೆಗಿನ ಮೊಗವೀರ ಮಕ್ಕಳಿಗಾಗಿ ದಾಸರ ಪದಗಳ ಸ್ಪರ್ಧೆಯನ್ನು ಉಡುಪಿ ಕೊಡವೂರು ಶ್ರೀ ಸಾಯಿಬಾಬಾ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಕೊಡವೂರು ಸಾಯಿಬಾಬಾ ಮಂದಿರದ ಟ್ರಸ್ಟಿ ,ಉದ್ಯಮಿ , ತೋಟದ ಮನೆ ದಿವಾಕರ ಶೆಟ್ಟಿ, ಸ್ಪರ್ಧೆಯ ತೀರ್ಪುಗಾರರಾದ ವಾಗ್ಮಿ,ವಿದ್ವಾನ್ ವೇದವ್ಯಾಸ ಪುರಾಣಿಕ್, ನಡಿಪಟ್ಣ ಮೊಗವೀರ ಸಭಾದ ಮಹಿಳಾ ವಿಭಾಗದ ಅಧ್ಯಕ್ಷೆ ಮಲ್ಲಿಕಾ ದಿನಕರ್ ದೀಪ ಬೆಳಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ದಿವಾಕರ ಶೆಟ್ಟಿ “ಮಕ್ಕಳ ಪ್ರತಿಭೆಗೆ ಅವಕಾಶ ನೀಡುವ ಹಾಗೂ ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಮೂಡಿಸುವ ಇಂತಹ ಸ್ಪರ್ಧೆಗಳು ಎಲ್ಲಾ ಕಡೆ ನಡೆಯಬೇಕು.ದಿ. ಉಗ್ಗುದೇವಿ ನಾರಾಯಣರ ಮಕ್ಕಳು ಮುಂಬೈ ಹಾಗೂ ತವರೂರಲ್ಲಿ ಮಾಡುತಿರುವ ಸೇವಾ ಕಾರ್ಯಗಳು ಶ್ಲಾಘನೀಯ” ಎಂದರು. ವೇದವ್ಯಾಸ ಪುರಾಣಿಕ್ ತನ್ನ ಅನಿಸಿಕೆ ತಿಳಿಸುತ್ತಾ “ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಏಳವೆಯಲ್ಲಿ ಗುರುತಿಸಿ ಪ್ರೋತ್ಸಾಹ ನೀಡಬೇಕು.ಶಿಕ್ಷಣ ದೊಂದಿಗೆ ಧಾರ್ಮಿಕ, ನೈತಿಕ ಜ್ಞಾನ ಅಗತ್ಯ” ಎಂದರು.ಈ ಸಂಧರ್ಭ ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾದ ಹಿರಿಯ ಸದಸ್ಯ ,ಭುವಾಜಿ ವೆಂಕಪ್ಪ ಪುತ್ರನ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ನಡೆದ ಸ್ಪರ್ಧೆಯು 5 ರಿಂದ 9 , 10 ರಿಂದ 15, 16 ರಿಂದ 18 ವರ್ಷದ ವಯೋಮಿತಿಯ 3 ವಿಭಾಗದಲ್ಲಿ ನಡೆಯಿತು.ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನ ವಿತರಿಸಲಾಯಿತು. ಮೊದಲ ವಿಭಾಗದಲ್ಲಿ ಸಂಚಲಿ ಪ್ರಥಮ, ಸಾನ್ವಿ ದ್ವಿತೀಯ, ಶ್ರೇಯ ತೃತೀಯ ಬಹುಮಾನ ಪಡೆದರೆ, 2ನೇ ವಿಭಾಗದಲ್ಲಿ ಲಿಖಿತ್ ಕರ್ಕೇರ ಮೊದಲ, ನವ್ಯ ಸುವರ್ಣ ಎರಡನೇ, ಚೈತ್ರ ಕರ್ಕೇರ ಮೂರನೇ ಸ್ಥಾನ ಪಡೆದರು.16 ರಿಂದ 18ರ ವಿಭಾಗದಲ್ಲಿ ಯಷ್ಮೀ ಕೆ. ಪ್ರಥಮ, ಅಮೃತ ಸುವರ್ಣ ದ್ವಿತೀಯ, ತ್ರಶಾ ಬಂಗೇರ ತೃತೀಯ ಸ್ಥಾನ ಗಳಿಸಿದರು.ದಿ. ಉಗ್ಗುದೇವಿ ನಾರಾಯಣ ರ ಸುಪುತ್ರ ಶ್ರೀನಿವಾಸ್, ದಿನಕರ ಪುತ್ರನ್ ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ,ಉಗ್ಗುದೇವಿ ನಾರಾಯಣ ರ ಪುತ್ರ ಚಂದ್ರಶೇಖರ್ ಎನ್.ಸಿ. ಪ್ರಾರಂಭದಲ್ಲಿ ಪ್ರಾರ್ಥನೆಗೈದು ಕೊನೆಯಲ್ಲಿ ವಂದಿಸಿದರು. ಸುಶಾಂಕ ಎಸ್.ನಿರೂಪಿಸಿದರು. ಸೇರಿದ್ದ ಎಲ್ಲರಿಗೂ ತೋಟದ ಮನೆ ದಿವಾಕರ್ ಶೆಟ್ಟಿ ಅವರು ಭೋಜನದ ವ್ಯವಸ್ಥೆ ಮಾಡಿದ್ದರು.

Related Posts

Leave a Comment

Translate »