Home Kannada ಕೋಲಾರದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆ ಮೇಲೆ ಹಲ್ಲೆ : ಚಿನ್ನದ ಸರ ಕದ್ದು ದುಷ್ಕರ್ಮಿ ಪರಾರಿ

ಕೋಲಾರದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆ ಮೇಲೆ ಹಲ್ಲೆ : ಚಿನ್ನದ ಸರ ಕದ್ದು ದುಷ್ಕರ್ಮಿ ಪರಾರಿ

by akash

ಕೋಲಾರ: ವಾಯು ವಿಹಾರಕ್ಕೆ ತೆರಳಿದ್ದ ಮಹಿಳೆ ಮೇಲೆ ಸರಗಳ್ಳನೋರ್ವ ಚಾಕುವಿನಿಂದ ಹಲ್ಲೆ ನಡೆಸಿ, ‌ಚಿನ್ನದ ಸರವನ್ನ ಎಗರಿಸಿ ಪರಾರಿಯಾಗಿರುವ ಪ್ರಕರಣ ನಗರದಲ್ಲಿ ನಡೆದಿದೆ. ನಗರದ ಕೋಟೆ ಬಡಾವಣೆಯಲ್ಲಿ ಈ ಘಟ‌ನೆ ಜರುಗಿದ್ದು, ಬೆಳಗ್ಗೆ ವಾಯುವಿಹಾರಕ್ಕೆ ಬಂದಿದ್ದ ವೇಳೆ ಅಖಿಲ ಎಂಬ ಮಹಿಳೆ ಮೇಲೆ ಎಗರಿದ ಸರಗಳ್ಳ, ಚಾಕುವಿನಿಂದ ದಾಳಿ ನಡೆಸಿದ್ದಾನೆ. ಇದರಿಂದ ಮಹಿಳೆಯ ತಲೆ ಹಾಗೂ ಕೈಗೆ ಗಾಯಗವಾಗಿದೆ‌. ಅಲ್ಲದೆ ಮಹಿಳೆಯ ಕೊರಳಲ್ಲಿದ್ದ ಸುಮಾರು 60 ಗ್ರಾಂ ಚಿನ್ನದ ಸರವನ್ನ ಕದ್ದಿದ್ದಾನೆ. ಮಹಿಳೆ ಕೂಗಿಕೊಂಡಾಗ ಸ್ಥಳೀಯರು ಸರಗಳ್ಳನನ್ನ ಸುತ್ತುವರೆಯುತ್ತಿದ್ದಂತೆ ಆತ ತಕ್ಷಣ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಚಾಕು ಬಿಟ್ಟು ಪರಾರಿಯಾಗಿದ್ದಾನೆ. ಗಾಯಗೊಂಡ ಮಹಿಳೆಯನ್ನ ಎಸ್.ಎನ್.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ ಸ್ಥಳಕ್ಕೆ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸರಗಳ್ಳನ ಬಂಧನಕ್ಕೆ ಬಲೆ ಬೀಸಿದ್ದಾರೆ.

Related Posts

Leave a Comment