ಕೋಲಾರ: ಇಲ್ಲಿನ ಆ್ಯಸಿಡ್ ಮತ್ತು ಪೇಂಟ್ ಸಂಗ್ರಹಿಸಿದ್ದ ಗೋಡೌನ್ಗೆ ಬೆಂಕಿ ತಗುಲಿದೆ. ಪರಿಣಾಮ ಗೋಡೌನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕೋಲಾರದ ಚೌಡೇಶ್ವರಿ ನಗರದಲ್ಲಿ ಘಟನೆ ಜರುಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಕ್ಕ-ಪಕ್ಕದ ಮನೆಗಳಿಗೂ ಬೆಂಕಿ ಹರಡುವ ಆತಂಕ ಮನೆಮಾಡಿದೆ.