Home Kannada ಕ್ರಿಕೆಟ್​ ಆಡುವಾಗ ಸಿಡಿಲು ಬಡಿದು ಆಟದ ಮೈದಾನದಲ್ಲೇ ವಿದ್ಯಾರ್ಥಿ ಸಾವು

ಕ್ರಿಕೆಟ್​ ಆಡುವಾಗ ಸಿಡಿಲು ಬಡಿದು ಆಟದ ಮೈದಾನದಲ್ಲೇ ವಿದ್ಯಾರ್ಥಿ ಸಾವು

by akash

ಹಾಸನ: ಸಿಡಿಲು ಬಡಿದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಉದಯ್ (18) ಸಿಡಿಲು ಬಡಿದು ಮೃತಪಟ್ಟ ವಿದ್ಯಾರ್ಥಿ. ಆನ್​ಲೈನ್​​ನಲ್ಲಿ ತರಗತಿಗಳನ್ನು ಮುಗಿಸಿಕೊಂಡು, ಸಂಜೆ ವೇಳೆ ಕ್ರಿಕೆಟ್ ಆಟವಾಡಲು ಮನೆಯಿಂದ ಹೊರ ಹೋಗಿದ್ದಾನೆ. ಮನೆ ಸಮೀಪವಿರುವ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುವ ವೇಳೆ ಮಳೆ ಶುರುವಾಗಿದೆ. ಕ್ರಿಕೆಟ್​ ಆಡುವಾಗ ಸಿಡಿಲು ನೇರವಾಗಿ ಉದಯ್​ ಎದೆಗೆ ಬಡಿದಿದ್ದು, ಕ್ಷಣಮಾತ್ರದಲ್ಲಿ ಉದಯ್ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಇನ್ನು ಉದಯ್ ಚನ್ನರಾಯಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Comment