Home Kannada ಗದ್ದೆಗೆ ನೀರು ಬಿಟ್ಡಿದ್ದನ್ನು ಪ್ರಶ್ನಿಸಿದಕ್ಕೆ ಮಾರಕಾಸ್ತ್ರಗಳಿಂದ ರೈತನ‌ ಹಲ್ಲೆ!

ಗದ್ದೆಗೆ ನೀರು ಬಿಟ್ಡಿದ್ದನ್ನು ಪ್ರಶ್ನಿಸಿದಕ್ಕೆ ಮಾರಕಾಸ್ತ್ರಗಳಿಂದ ರೈತನ‌ ಹಲ್ಲೆ!

by Eha

ದಾವಣಗೆರೆ: ಗದ್ದೆಗೆ ನೀರು ಬಿಟ್ಟು ಬೆಳೆ ನಾಶ ಮಾಡಲು ಯತ್ನಿಸಿದ್ದನ್ನು ಪ್ರಶ್ನಿಸಿದಕ್ಕೆ ರೈತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ವಡ್ನಾಹಳ್ಳಿಯಲ್ಲಿ ನಡೆದಿದೆ. ವಡ್ನಾಹಳ್ಳಿ ಗ್ರಾಮದ ಜಮೀನೊಂದರಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ನಡೆದಿದೆ. ಭತ್ತದ ಗದ್ದೆಗೆ ನೀರು ಹರಿಸಿದ್ದನ್ನು ಪ್ರಶ್ನಿಸಿದಕ್ಕಾಗಿ ವಡ್ನಾಹಳ್ಳಿ ಗ್ರಾಮದ ಹಜರತ್ ಅಲಿ ಎಂಬ ರೈತನ ಮೇಲೆ ಅದೇ ಗ್ರಾಮ ಬೋಗಪ್ಪ, ನಾಗರಾಜ್, ಅಂಜಿನಪ್ಪ ಸೇರಿದಂತೆ ಇಬ್ಬರು ಹೆಣ್ಣು ಮಕ್ಕಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಗೊಳಗಾದ ಹಜರತ್ ಅಲಿ ಜಮೀನಿನ ಪಕ್ಕದಲ್ಲೇ ಹಲ್ಲೆ ಮಾಡಿದ ಆರೋಪಿಗಳ ಜಮೀನುಗಳಿವೆ.

ಹಜರತ್ ಅಲಿಯ ಭತ್ತದ ಗದ್ದೆಗೆ ನೀರು ಹರಿಸಲು ಆರೋಪಿಗಳು ಯತ್ನಿಸಿದ್ದಾರೆ‌. ಇದನ್ನು ತಡೆಯಲು ಹೋದ ರೈತ ಹಜರತ್ ಅಲಿಗೆ ಗದ್ದೆಯಲ್ಲೇ ಮನಬಂದಂತೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗ್ತಿದೆ. ಬಳಿಕ ಹಲ್ಲೆಗೊಳಗಾಗಿ ಗದ್ದೆಯಲ್ಲೇ ಬಿದ್ದಿದ್ದ ಹಜರತ್ ಅಲಿಯನ್ನು ಮಡದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಜರತ್ ಅಲಿ ಹಾಗು ಆರೋಪಿಗಳಾದ ಬೋಗಪ್ಪ, ನಾಗರಾಜ್, ಅಂಜಿನಪ್ಪನವರ ಮಧ್ಯೆ ಜಮೀನು ವಿಚಾರವಾಗಿ ಸಾಕಷ್ಟು ಬಾರಿ ಗಲಾಟೆ ನಡೆದಿದೆ. ಹರಪ್ಪನಹಳ್ಳಿ‌ ಹಾಗು ಅರಸೀಕೆರೆ ಪೋಲಿಸ್ ಠಾಣೆಗಳಲ್ಲಿ ಪ್ರಕರಣ ಕೂಡ ದಾಖಲಾಗಿವೆ. ಆರೋಪಿಗಳು ರೈತ ಹಜರತ್ ಅಲಿಯ ಬೆಳೆ ನಾಶ ಮಾಡುವ ನೆಪದಲ್ಲಿ ಮತ್ತೆ ಗಲಾಟೆ‌ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಹಜರತ್ ಅಲಿ ಕುಟುಂಬ ಚಿಂತೆಗೀಡಾಗಿದೆ. ಇನ್ನು ಈ ಜಮೀನಿನ ವಿಚಾರವಾಗಿ ಕೆಲ ರಾಜಕಾರಣಿಗಳ ಕೈವಾಡವಿದೆ ಎಂಬುದು ಹಜರತ್ ಅಲಿ ಸಂಬಂಧಿಕರ ಆರೋಪವಾಗಿದೆ. ಸಾಕಷ್ಟು ಬಾರಿ ಹಲ್ಲೆ ನಡೆಸಿ ತಮ್ಮ ಪ್ರಭಾವ ಬೀರುತ್ತಿರುವರ ವಿರುದ್ಧ ಕಠಿಣ ಕ್ರಮವಾಗಬೇಕೆಂಬುದು ಜನ್ರ ಆಶಯವಾಗಿದೆ.

Related Posts

Leave a Comment