Home Kannada ಗಾಂಜಾ ನಶೆಯಲ್ಲಿ ಯದ್ವಾ-ತದ್ವಾ ಆಟೋ ಓಡಿಸಿ ಅಪಘಾತ: ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ!

ಗಾಂಜಾ ನಶೆಯಲ್ಲಿ ಯದ್ವಾ-ತದ್ವಾ ಆಟೋ ಓಡಿಸಿ ಅಪಘಾತ: ಚಾಲಕನಿಗೆ ಹಿಗ್ಗಾಮುಗ್ಗಾ ಥಳಿತ!

by Eha

ಬೆಳಗಾವಿ: ಮಾರುತಿ ಗಲ್ಲಿಯಲ್ಲಿ ಗಾಂಜಾ ನಶೆಯಲ್ಲಿ ಆಟೋ ಚಾಲಕನೋರ್ವ ಯದ್ವಾ-ತದ್ವಾ ಆಟೋ ಓಡಿಸಿ ಹಲವರನ್ನು ಗಾಯಗೊಳಿಸಿದ್ದಾನೆ. ಪರಿಣಾಮ, ಚಾಲಕನನ್ನು ಹಿಡಿದ ಸಾರ್ವಜನಿಕರು ಥಳಿಸಿರುವ ಘಟನೆ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವಕನನ್ನು ರಕ್ಷಿಸಿದ್ದು, ನಗರದ ಜುಬೇರ ಮಹ್ಮದ್ ಸಂಗೋಳ್ಳಿ ಎಂಬಾತ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ‌.

ಈತ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದ್ದು, ಯದ್ವಾ-ತದ್ವಾ ಆಟೋ ಚಾಲನೆ ಮಾಡುವ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿರುವ ಹಲವು ಜನರಿಗೆ ತನ್ನ ಆಟೋದಿಂದ ಡಿಕ್ಕಿ ಹೊಡೆಸಿಕೊಂಡು ಹೋಗಿದ್ದಾನೆ. ಈ ವೇಳೆ ಆಟೋ ಚಾಲಕನನ್ನು ಹಿಡಿದ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಆಟೋ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Posts

Leave a Comment