Home Kannada ಗುಡಿಸಲಿಗೆ ಬೆಂಕಿ ಬಿದ್ದು ಅಪಾರ ನಷ್ಟ: ರೈತ ಕುಟುಂಬ ಕಂಗಾಲು

ಗುಡಿಸಲಿಗೆ ಬೆಂಕಿ ಬಿದ್ದು ಅಪಾರ ನಷ್ಟ: ರೈತ ಕುಟುಂಬ ಕಂಗಾಲು

by Eha

ಅಥಣಿ: ತಾಲೂಕಿನ ಭಾವನದಡ್ಡಿ ಗ್ರಾಮದಲ್ಲಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ. ಪಾಂಡುರಂಗ ವಿಟೂಬಾ ವಾಲಿಕಾರ್ ಎಂಬವರ ಗುಡಿಸಿಲಿಗೆ ಬೆಂಕಿ ತಗುಲಿ, ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಗೃಹ ಬಳಕೆ ವಸ್ತುಗಳು ಹಾಗೂ ಹತ್ತು ಗ್ರಾಂ ಚಿನ್ನ, ದವಸ ಧಾನ್ಯಗಳು, ಬಟ್ಟೆ ಪಾತ್ರೆಗಳು ಬೆಂಕಿಗೆ ಆಹುತಿಯಾಗಿದೆ. ಘಟನೆಯಿಂದ ಕುಟುಂಬ ಸಂಕಷ್ಟದಲ್ಲಿದೆ. ಮಕ್ಕಳ ಪುಸ್ತಕ ಹಾಗೂ ಶಾಲಾ ದಾಖಲಾತಿ, ಇತ್ತೀಚೆಗೆಯಷ್ಟೇ ಕುರಿಗಳನ್ನು ಮಾರಾಟ ಮಾಡಿ ತಂದ 60 ಸಾವಿರ ರೂಪಾಯಿಯನ್ನು ಮನೆಯಲ್ಲಿ ಇಟ್ಟಿದ್ದರು. ಅದೂ ಕೂಡ ಸುಟ್ಟು ಹೋಗಿದೆಯೆಂದು ಸಂತ್ರಸ್ತ ಕುಟುಂಬ ಸದಸ್ಯರು ದುಃಖ ವ್ಯಕ್ತಪಡಿಸಿದರು. ಇದೇ ವೇಳೆ, ನಮಗೆ ಸರ್ಕಾರ ಸಹಾಯ ಮಾಡಬೇಕು ಎಂದು ಮಾಧ್ಯಮದ ಮುಖಾಂತರ ಮನವಿ ಸಲ್ಲಿಸಿದರು.

Related Posts

Leave a Comment