Home Kannada ಗೋರೆಗಾಂವ್ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ.ಕೋಟ್ಯಾನ್ ಆಯ್ಕೆ.

ಗೋರೆಗಾಂವ್ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ.ಕೋಟ್ಯಾನ್ ಆಯ್ಕೆ.

by akash

ಮುಂಬೈ ಕನ್ನಡಿಗರ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಗೋರೆಗಾಂವ್ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ನಿತ್ಯಾನಂದ ಡಿ.ಕೋಟ್ಯಾನ್ ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಸಂಘದ 62ನೇ ವಾರ್ಷಿಕ ಮಹಾಸಭೆ ಜರಗಿದ್ದು , ಸಭೆಯಲ್ಲಿ ನಿತ್ಯಾನಂದ ಕೋಟ್ಯಾನ್ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಯ್ತು. ಗೋರೆಗಾಂವ್ ಕರ್ನಾಟಕ ಸಂಘದ ಸಕ್ರಿಯ ಸದಸ್ಯರಾದ ನಿತ್ಯನಾನಂದ ಕೋಟ್ಯಾನ್ ,ಸಂಘದ ಗೌರವ ಕಾರ್ಯದರ್ಶಿಯಾಗಿ , ಗೌರವ ಕೋಶಾಧಿಕಾರಿಯಾಗಿಯೂ ಕಾರ್ಯನಿರ್ವಸಿದ್ದರು. ದೇಶದ ಸಹಕಾರಿ ರಂಗದ ಶ್ರೇಷ್ಠ ಬ್ಯಾಂಕ್ ಗಳಲ್ಲಿ ಒಂದಾಗಿರುವ ಭಾರತ್ ಬ್ಯಾಂಕ್ ನಲ್ಲಿ ಪ್ರಧಾನ ಪ್ರಬಂದಕರಾಗಿ ಕಾರ್ಯ ನಿರ್ವಹಿಸಿ , ನಿವೃತ್ತರಾದ ನಿತ್ಯಾನಂದ ಕೋಟ್ಯಾನ್ ವಿವಿಧ ಸಂಘಟನೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವರು. ಮುಂಬೈಯ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆ ಬಿಲ್ಲವರ ಏಸೋಸಿಯೇಷನ್ ನ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಪ್ರಸ್ತುತ ಕನ್ನಡ ಸಂಘ ಸಾಂತಕ್ರೂಜ್ ನ ಉಪಾಧ್ಯಕ್ಷರಾಗಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷರಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಉಪಾಧ್ಯಕ್ಷರಾಗಿ, ತನ್ನ ಹುಟ್ಟೂರು ತೋನ್ಸೆಯ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿಯೂ ಕಾರ್ಯವೆಸಗುತ್ತಿರುವರು. ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ನಿತ್ಯಾನಂದ ಕೋಟ್ಯಾನ್ ಕ್ರಿಯಾಶೀಲರಾಗಿರುವರಲ್ಲದೆ , ಓರ್ವ ಉತ್ತಮ ವಾಗ್ಮಿಯಾಗಿದ್ದು ,ಎಂಥಹ ಪರಿಸ್ಥಿತಿಯನ್ನೂ , ಚಾಕಚಕ್ಯತೆಯಿಂದ ನಿಭಾಯಿಸಬಲ್ಲರು. ಸಂಘ -ಸಂಸ್ಥೆಗಳಲ್ಲಿ ದುಡಿದ ಅಪಾರ ಅನುಭವ ಹೊಂದಿರುವ ನಿತ್ಯಾನಂದ ಕೋಟ್ಯಾನ್ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘ ಮತ್ತಷ್ಟು ಸದೃಢವಾಗಲಿ ಎಂಬ ಶುಭ ಹಾರೈಕೆ ನಮ್ಮದು.

Related Posts

Leave a Comment

Translate »